ರಾಜ್ಯ

ಏರೋ ಇಂಡಿಯಾ 2019 ಪ್ರದರ್ಶನ; ಈ ವರ್ಷದ ವಿಶೇಷತೆಗಳು ಏನೇನು?

ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ. ಒಟ್ಟಾರೆ ...

ಏರೋ ಇಂಡಿಯಾ 2019 ಪ್ರದರ್ಶನ; ಈ ವರ್ಷದ ವಿಶೇಷತೆಗಳು ಏನೇನು?
ಏರೋ ಇಂಡಿಯಾ 2019 ಉದ್ಘಾಟಿಸಿದ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್
Published On :
ಬೆಂಗಳೂರು: ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ. ಒಟ್ಟಾರೆ 61 ಲೋಹದ ಹಕ್ಕಿಗಳು ಬಾನಂಗಳದಲ್ಲಿ ತಮ್ಮ ಚಮಾತ್ಕಾರ ಪ್ರದರ್ಶಿಸಲಿವೆ. ನೋಡುಗರಿಗಂತೂ ಹಬ್ಬ. 
ಭಾರತದ ರಕ್ಷಣಾ ಇಲಾಖೆಯ ಶಕ್ತಿಯನ್ನು ತೋರಿಸಲು ಇದೊಂದು ಉತ್ತಮ ವೇದಿಕೆ. 403 ಪ್ರದರ್ಶಕರು ಈ ಬಾರಿಯ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ದುಂಡು ಮೇಜಿನ ಸಭೆ, ಡ್ರೋನ್ ಒಲಿಂಪಿಕ್ಸ್, ಸ್ಟಾರ್ಟ್ ಅಪ್ ಮ್ಯಾರಥಾನ್, ಮಹಿಳಾ ಸಾಧಕಿಯರ ಸಂಭ್ರಮಾಚರಣೆ ಈ ಬಾರಿಯ ಪ್ರದರ್ಶನದ ಮುಖ್ಯಾಂಶಗಳು. 
ಈ ವರ್ಷದ ಪ್ರದರ್ಶನ ಭಾರತದ ವೈಮಾನಿಕ ಪ್ರದರ್ಶನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾಗಿದ್ದು 51 ದೇಶಗಳು ಮತ್ತು 44 ಅಧಿಕಾರಿ ನಿಯೋಗಗಳು ಭಾಗವಹಿಸುತ್ತಿವೆ.
5 ದಿನಗಳ ಪ್ರದರ್ಶನದಲ್ಲಿ ಪ್ರತಿದಿನ ಒಂದೊಂದು ಧ್ಯೋಯೋದ್ದೇಶವಿರುತ್ತದೆ. ವಿಶೇಷ ಆದ್ಯತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ದುಂಡು ಮೇಜಿನ ಸಭೆಗೆ ನೀಡಲಾಗುತ್ತದೆ.
ಯಾವ್ಯಾವ ವಿಮಾನಗಳು: ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನ ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್ ನ ವೈಮಾನಿಕ ಪ್ರದರ್ಶನವಿರುತ್ತದೆ. ತೇಜಸ್ ಹೊರತಾಗಿ ಹೆಚ್ ಟಿಟಿ-40(ಮೂಲ ತರಬೇತಿ ವಿಮಾನ), ಮೊದಲ ಸ್ವದೇಶಿ ಉನ್ನತೀಕರಿಸಿದ ಹಾಕ್ ಎಂಕೆ 132 ಹಾಕ್-ಐ, ಸಿವಿಲ್ ಡೊ-228, ಅತ್ಯಾಧುನಿಕ ಹಗುರ ಹೆಲಿಕಾಪ್ಟರ್(ರುದ್ರ), ಹಗುರ ಬಳಕೆ ಹೆಲಿಕಾಪ್ಟರ್ (ಎಲ್ ಯುಎಚ್), ಹಗುರ ಯುದ್ಧ ಹೆಲಿಕಾಪ್ಟರ್ (ಎಲ್ ಯುಎಚ್) ಹಾರಾಟ ನಡೆಸಲಿವೆ.
ಭಾರತದ ಸಾರಂಗ್ (ಎಎಲ್ ಎಚ್-ದ್ರುವ) ಮತ್ತು ಇಂಗ್ಲೆಂಡ್ ಮೂಲದ ಯಕೊವ್ಲೆವ್ಸ್ ಕೂಡ ಚಮತ್ಕಾರ ಪ್ರದರ್ಶಿಸಲಿವೆ. ಹೆಚ್ ಎಎಲ್ ನ ಹಗುರ ಬಳಕೆ ಹೆಲಿಕಾಪ್ಟರ್ (ಪಿಟಿ-1), ಹಗುರ ಯುದ್ಧ ವಿಮಾನ(ಟಿಡಿ-2), ಸುಧಾರಿತ ಹಗುರ ಹೆಲಿಕಾಪ್ಟರ್ (ರುದ್ರ) ಮತ್ತು ಎಎಲ್ ಎಚ್ ಎಂಐಸಿಯು(ವೈದ್ಯಕೀಯ ತುರ್ತು ನಿಗಾ ಘಟಕ) ಪ್ರದರ್ಶನಕ್ಕೆ ಇರುತ್ತದೆ.ಸುಕೊಯ್ ಸು-30, ರಫೆಲ್, ಎಫ್ -16 ಫೈಟಿಂಗ್ ಫಾಲ್ಕನ್, ಎಫ್/ಎ-18 ಸುಪರ್ ಹಾರ್ನೆಟ್ ಮತ್ತು ಮೈಟಿ ಬಿ-52 ಪ್ರದರ್ಶನದ ಭಾಗವಾಗಿರುತ್ತದೆ. 
ವಿಮಾನಯಾನ ಕಂಪೆನಿಗಳು, ರಕ್ಷಣಾ ವಲಯ ಮತ್ತು ಸರ್ಕಾರಕ್ಕೆ ಹೊಸ ಒಪ್ಪಂದ ಮತ್ತು ಗುತ್ತಿಗೆ ಮಾಡಿಕೊಳ್ಳಲು ಏರೋ ಇಂಡಿಯಾ ಪ್ರದರ್ಶನ ಒಂದು ವೇದಿಕೆಯಾಗಿರುತ್ತದೆ.
ದೇಶಗಳು: ಅಮೆರಿಕಾ, ಫ್ರಾನ್ಸ್‌, ಇಸ್ರೇಲ್‌, ಇಂಗ್ಲೆಂಡ್‌, ರಷ್ಯಾ, ಜರ್ಮನಿ, ಸ್ವೀಡನ್‌, ಸಿಂಗಾಪುರ, ಸ್ಪೇನ್‌, ಇಟಲಿ, ಯುಎಇ, ದಕ್ಷಿಣ ಕೋರಿಯಾ, ಕೆನಡಾ, ಡೆಕ್‌ ರಿಪಬ್ಲಿಕ್‌. ಆಸ್ಪ್ರೇಲಿಯಾ ಸೇರಿದಂತೆ 51 ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ರಕ್ಷಣಾ ವಲಯ ಮತ್ತು ನಾಗರೀಕ ವಿಮಾನಯಾನ ವಲಯ ಹಾಗೂ ಮಿಲಿಟರಿ ಕ್ಷೇತ್ರದ ತಂತ್ರಜ್ಞಾಳನ್ನು ಪ್ರದರ್ಶಿಸಲಿವೆ. 
ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ವಿವಿಧ ಕಂಪನಿಗಳು 28,398 ಚದರ ಮೀಟರ್‌ ಜಾಗದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡುತ್ತಿವೆ. ವೈಮಾನಿಕ ಪ್ರದರ್ಶನದಲ್ಲಿ ದೇಶ-ವಿದೇಶಗಳ 403 ಪ್ರದರ್ಶನಕರು, ಕಂಪನಿಗಳು ಭಾಗವಹಿಸುತ್ತಿವೆ. ತಂತ್ರಜ್ಞಾನ, ಅಭಿವೃದ್ಧಿ ಸಂಬಂಧಿಸಿದಂತೆ ನವೀನ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇರುತ್ತವೆ. ಹೊಸ ಮಾರುಕಟ್ಟೆಗೆ ತೆರೆದುಕೊಳ್ಳಲು ಅನುಕೂಲವಾಗಲಿದೆ. 
ಇಂದಿನಿಂದ 24ರವರೆಗೆ ಐದು ದಿನಗಳ ಕಾಲ ಬೆಳಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 2ರಿಂದ 5.30ರ ವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ನಾಳೆ ಬೆಳಗ್ಗೆ ಪ್ರದರ್ಶನವಿರುವುದಿಲ್ಲ. 
ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಸಕ್ತಿಯಿರುವವರು  ಏರೋ ಇಂಡಿಯಾ ವೆಬ್‌ಸೈಟ್‌ ಮತ್ತು ಬುಕ್‌ಮೈಶೋ ಆ್ಯಪ್‌ ಮೂಲಕ ಪಾಸ್‌ ಖರೀದಿಸಬಹುದು. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುವ ಗೇಟ್‌ಗಳ ಬಳಿಯು ಪಾಸ್‌ ಖರೀದಿಸಲು ಅವಕಾಶ ಇದೆ.
ಪಾಸ್‌ ದರ 650, 1,800 ಮತ್ತು 2,750 ರೂ. ಇರುತ್ತದೆ. ಪ್ರವೇಶ ದ್ವಾರ ಸೇರಿದಂತೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಏರೋ ಇಂಡಿಯಾ ವೆಬ್‌ಸೈಟ್‌ ಹಾಗೂ ಬುಕ್‌ ಮೈ ಶೋ ಆ್ಯಪ್‌ಗೆ ಸಾರ್ವಜನಿಕರು ಭೇಟಿ ನೀಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.