ಸರ್ಕಾರಿ ವಿಶ್ವವಿದ್ಯಾಲಯಗಳಿಂದ ಕೇವಲ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ನಿರ್ಧಾರ
ರಾಜ್ಯ ಸರ್ಕಾರ ನಡೆಸುವ ವಿಶ್ವ ವಿದ್ಯಾಲಯಗಳಿಂದ ಪ್ರತಿ ವರ್ಷ ಕೇವಲ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ರಾಜ್ಯ ಪಾಲರು ಹಾಗೂ ವಿವಿಗಳ ...

Published On :
ಬೆಂಗಳೂರು: ರಾಜ್ಯ ಸರ್ಕಾರ ನಡೆಸುವ ವಿಶ್ವ ವಿದ್ಯಾಲಯಗಳಿಂದ ಪ್ರತಿ ವರ್ಷ ಕೇವಲ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ರಾಜ್ಯ ಪಾಲರು ಹಾಗೂ ವಿವಿಗಳ ಉಪಕುಲಪತಿಗಳು ನಿರ್ಧರಿಸಿದ್ದಾರೆ.
ಗೌರವ ಡಾಕ್ಟರೇಟ್ ಪ್ರಶಸ್ತಿಗಳು ರಾಜಕೀಯಗೊಳ್ಳುತ್ತಿದ್ದು, ಪಕ್ಷಪಾತ ನಿಲುವನ್ನು ನಿರ್ಬಂಧಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜಭವನ ಮೂಲಗಳು ತಿಳಿಸಿವೆ.
ಕೆಲವು ವಿವಿಗಳು ಗೌರವಕ್ಕೆ ಅನರ್ಹರಾಗಿದ್ದವರ ಹೆಸರನ್ನು ಶಿಫಾರಸು ಮಾಡುತ್ತಾರೆ, ಒಂದು ವೇಳೆ ಗೌರವ ಡಾಕ್ಟರೇಟ್ ಗೆ ಎರಡಕ್ಕಿಂತ ಹೆಚ್ಚಿನ ಹೆಸರುಗಳನ್ನು ಶಿಫಾರಸು ಮಾಡಿದರೇ ಮುಂದಿನ ನಿರ್ಧಾರವನ್ನು ರಾಜ್ಯಪಾಲರೇ ಬಗೆಹರಿಸುತ್ತಾರೆ ಎಂದು ತಿಳಿದು ಬಂದಿದೆ.,
ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾನಿಲಯ 7 ಹೆಸರುಗಳನ್ನು ಗೌರವ ಡಾಕ್ಟರೇಟ್ ಗೆ ಪ್ರಸ್ತಾಪಿಸಿತ್ತು, ರಾಜ್ಯ ಪಾಲರು ಅದರಲ್ಲಿ ಕೇವಲ ಒಬ್ಬರಿಗೆ ಶಿಪಾರಸು ಮಾಡಿದರು. ವಿಟಿಯು ಶಿಫಾರಸು ಮಾಡಿದ್ದ 7 ಮಂದಿಯಲ್ಲಿ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳ ವಿವಾದಾತ್ಮಕ ವ್ಸಕ್ತಿಯ ಹೆಸರಿತ್ತು, ಬೆಂಗಳೂರು ವಿವಿ ಇನ್ನೂ ಪಟ್ಟಿ ಕಳಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
universityKarnataka GovernmentVajubhai Valahonorary doctorateಗೌರವ ಡಾಕ್ಟರೇಟ್ಕರ್ನಾಟಕ ಸರ್ಕಾರವಜೂಬಾಯಿ ವಾಲಾವಿಶ್ವವಿದ್ಯಾನಿಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


