ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ಯಶವಂತಪುರದಿಂದ ನಿರ್ಗಮನಕ್ಕೆ ಒತ್ತಾಯ
ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲು ಬಾಣಸವಾಡಿ ಬದಲು ಯಶವಂತಪುರದಿಂದ ನಿರ್ಗಮಿಸಬೇಕು...

ಬೆಂಗಳೂರು: ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲು ಬಾಣಸವಾಡಿ ಬದಲು ಯಶವಂತಪುರದಿಂದ ನಿರ್ಗಮಿಸಬೇಕು ಎಂದು ಕರ್ನಾಟಕ-ಕೇರಳ ಪ್ರಯಾಣಿಕರ ವೇದಿಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದೆ. ಫೆಬ್ರವರಿ 4ರಂದು ರೈಲಿನ ನಿರ್ಗಮ ಕೇಂದ್ರವನ್ನು ಬಾಣಸವಾಡಿಗೆ ವರ್ಗಾಯಿಸಲಾಗಿದೆ.
ಕರ್ನಾಟಕ ಪ್ರವಾಸಿ ಕಾಂಗ್ರೆಸ್ ನ ಕಾರ್ಯಕಾರಿ ಅಧ್ಯಕ್ಷ ವೇಣು ಥೋಮಸ್, ಖಾಸಗಿ ಬಸ್ ಗಳ ಲಾಬಿಗೆ ರೈಲ್ವೆ ಅಧಿಕಾರಿಗಳು ಮಣಿಯುತ್ತಿದ್ದಾರೆ. ಕಣ್ಣೂರಿಗೆ ರೈಲಿನ ಟಿಕೆಟ್ ದರ 400 ರೂಪಾಯಿ, ಬಸ್ಸು ಪ್ರಯಾಣದ ವೆಚ್ಚ 900 ರೂಪಾಯಿಯಾಗಿದೆ. ಯಶವಂತಪುರ ಸುತ್ತಮುತ್ತ ಇರುವವರು ಈ ರೈಲಿನಲ್ಲಿ ಪ್ರಯಾಣಿಸಲು 300ರಿಂದ 400 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಯಶವಂತಪುರಕ್ಕೆ ಮೆಟ್ರೊ ಮತ್ತು ಇತರ ವಾಹನಗಳ ಸಂಚಾರ ವ್ಯವಸ್ಥೆ ಚೆನ್ನಾಗಿದೆ, ಆದರೆ ಬಾಣಸವಾಡಿಗೆ ಆ ವ್ಯವಸ್ಥೆಯಿಲ್ಲ, ಇದರಿಂದ ಪ್ರಯಾಣಿಕರಿಗೆ ಅಲ್ಲಿಗೆ ಹೋಗಲು ಕಷ್ಟವಾಗುತ್ತಿದೆ ಎಂದರು.
ಯಶವಂತಪುರದಿಂದ ರೈಲು ಹೊರಟರೆ ಸಾಕಷ್ಟು ಪ್ರಯಾಣಿಕರಿರುತ್ತಾರೆ, ಆದರೆ ಬಾಣಸವಾಡಿಯಿಂದ ನಿರ್ಗಮಿಸುವಾಗ ಅರ್ಧದಷ್ಟು ಪ್ರಯಾಣಿಕರು ಕೂಡ ಇರುವುದಿಲ್ಲ. ಖಾಸಗಿ ಬಸ್ಸುಗಳಲ್ಲಿ ಸಾಕಷ್ಟು ಜನರಿರುತ್ತಾರೆ. ಯಶವಂತಪುರದಿಂದ ರಾತ್ರಿ 8.25ಕ್ಕೆ ನಿರ್ಗಮಿಸುತ್ತಿದ್ದ ರೈಲು ಬಾಣಸವಾಡಿಯಿಂದ 2-3 ಗಂಟೆ ತಡವಾಗಿ ಹೋಗುತ್ತದೆ ಎನ್ನುತ್ತಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಈ ಬಗ್ಗೆ ರೈಲ್ವೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


