ರಾಜ್ಯ

ಹಂಪಿ: ಅಮೂಲ್ಯ ಕಂಬ, ಸ್ಮಾರಕಗಳನ್ನು ನೆಲಕ್ಕುರುಳಿಸಿದ ಕಿಡಿಗೇಡಿಗಳು: ಸ್ಥಳೀಯರಿಂದ ಆಕ್ರೋಶ

ವಿಜಯನಗರ ಸಾಮ್ರಾಜ್ಯ, ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಹಂಪಿಯಲ್ಲಿ ಕಿಡಿಗೇಡಿಗಳ ಗುಂಪೊಂದು ಅಮೂಲ್ಯ ಸ್ಮಾರಕಗಳನ್ನು ನೆಲಕ್ಕುರುಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.

ಹಂಪಿ: ಅಮೂಲ್ಯ ಕಂಬ, ಸ್ಮಾರಕಗಳನ್ನು ನೆಲಕ್ಕುರುಳಿಸಿದ ಕಿಡಿಗೇಡಿಗಳು: ಸ್ಥಳೀಯರಿಂದ ಆಕ್ರೋಶ
ಹಂಪಿ: ಅಮೂಲ್ಯ ಸ್ಮಾರಕಗಳನ್ನು ನೆಲಕ್ಕುರುಳಿಸಿದ ಕಿಡಿಗೇಡಿಗಳು: ಸ್ಥಳೀಯರಿಂದ ಆಕ್ರೋಶ
Published On :
ಬಳ್ಳಾರಿ: ವಿಜಯನಗರ ಸಾಮ್ರಾಜ್ಯ, ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಹಂಪಿಯಲ್ಲಿ ಕಿಡಿಗೇಡಿಗಳ ಗುಂಪೊಂದು ಅಮೂಲ್ಯ ಸ್ಮಾರಕಗಳನ್ನು ನೆಲಕ್ಕುರುಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ. 
ಕೆಲವೇ ವಾರಗಳ ಹಿಂದೆ ಟೈಮ್ಸ್ ಮ್ಯಾಗಜೀನ್ ಹಂಪಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಗುರುತಿಸಿತ್ತು. ಇದನ್ನು ಸಂಭ್ರಮದಿಂದ ಸ್ವಾಗತಿಸುವ ವೇಳೆಗೆ,  ಸ್ಮಾರಕಗಳನ್ನು ನೆಲಕ್ಕುರುಳಿಸುತ್ತಿರುವ ವಿಡಿಯೋ  ವೈರಲ್ ಆಗತೊಡಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ.  ಗಜಶಾಲೆಯ ಹಿಂಭಾಗದ ವಿಷ್ಣು ದೇವಾಲಯ ಆವರಣದ ಬೃಹತ್ ಕಲ್ಲಿನ ಕಂಬಗಳನ್ನು ಸ್ಥಳಿಯರು ನೆಲಕ್ಕೆ ಉರುಳಿಸಿದ್ದಾರೆ. 
ಗರ್ಭಗುಡಿಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೃಹತ್ ಕಂಭಗಳನ್ನು ತಳ್ಳಿ ನೆಲಕ್ಕುರುಳಿಸಿರುವ ಪ್ರವಾಸಿಗಳ ಕಿಡಿಗೇಡಿ ಕೃತ್ಯವನ್ನು ಪ್ರವಾಸಿಗರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.  ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಇಲಾಖೆ ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಸೂಕ್ತ ಭದ್ರತೆ ಕಲ್ಪಿಸಿದ್ದರೂ ಈ ರೀತಿ ನಡೆದಿದೆ. ಹಾಗಂತ ಹಂಪಿಯ ಅಮೂಲ್ಯ ಸ್ಮಾರಕಗಳು ಹಾನಿಗೀಡಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಹ ಅನೇಕ ಬಾರಿ ಸ್ಮಾರಕಗಳನ್ನು ಹಾಳುಗೆಡವಲಾಗಿದೆ.  ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿರುವ ಇಲಾಖೆಗಳ ನಿರ್ಲಕ್ಷ್ಯವನ್ನು ತೋರುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.