ಉದ್ಭವ್ ಠಾಕ್ರೆ ಮುಖ್ಯಮಂತ್ರಿ ಆದ ಬಳಿಕವೇ ಗಡಿವಿವಾದ ಹುಟ್ಟಿದೆ: ಶ್ರೀರಾಮುಲು
ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಕೊಲ್ಲಾಪುರದಲ್ಲಿ ಶಿವಸೇನೆ ಅಭಿಮಾನಿಗಳಿಂದ ಪುಂಡಾಟ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಉದ್ಭವ್ ಠಾಕ್ರೆ ಮುಖ್ಯಮಂತ್ರಿ ಆದ ಬಳಿಕ ಇಂತಹದ್ದೆಲ್ಲ ನಡೆಯುತ್ತಿದೆ.

ಬೆಂಗಳೂರು: ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಕೊಲ್ಲಾಪುರದಲ್ಲಿ ಶಿವಸೇನೆ ಅಭಿಮಾನಿಗಳಿಂದ ಪುಂಡಾಟ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಉದ್ಭವ್ ಠಾಕ್ರೆ ಮುಖ್ಯಮಂತ್ರಿ ಆದ ಬಳಿಕ ಇಂತಹದ್ದೆಲ್ಲ ನಡೆಯುತ್ತಿದೆ. ಬಿಜೆಪಿಯ ಧ್ವಜಕ್ಕೆ ಬೆಂಕಿ ಹಚ್ಚಿ ಉದ್ಧಟತನ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲ, ಜಲ, ಭಾಷೆ ವಿಚಾರದಲ್ಲಿ ಒಗ್ಗಟ್ಟಾಗುತ್ತೇವೆ. ಕರ್ನಾಟಕ ಸರ್ಕಾರ ಕೂಡ ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಹೋರಾಟ ನಿರಂತರವಾಗಿ ನಡೆದಿದೆ. ನಾವು ಒಗ್ಗಟ್ಟಾಗಿ ನೆಲ ಜಲದ ಬಗ್ಗೆ ಹೋರಾಡುತ್ತೇವೆ ಎಂದರು.
ದೇವೇಂದ್ರ ಫಡ್ನವಿಸ್ ಬೆಂಬಲದ ಬಗ್ಗೆಯೂ ನಾವು ಗಮನಿಸುತ್ತೇವೆ. ಕೇಂದ್ರದ ನಾಯಕರು ಈ ಬಗ್ಗೆ ಕಣ್ಣಿಟ್ಟಿದ್ದಾರೆ ಎಂದರು.
ಶಿವಸೇನೆಯವರು ಬೇಕಾದರೆ ಕಾನೂನು ಹೋರಾಟ ಮಾಡಲಿ, ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದ ಅವರು ಇದರ ಬದಲಾಗಿ ಕೊಲ್ಲಾಪುರದಲ್ಲಿ ಸಿಎಂ ಬಿಎಸ್‌ವೈ ಪ್ರತಿಕೃತಿ ದಹನ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


