ಪೇಜಾವರ ಶ್ರೀಗಳ 9 ದಿನಗಳ ಜೀವನ್ಮರಣ ಹೋರಾಟ: ಅರೋಗ್ಯ ನಿರ್ಲಕ್ಷ್ಯಿಸಿದ್ರಾ ಶ್ರೀಗಳು?
ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ(88) ಭಾನುವಾರ ಪೇಜಾವರ ಮಠದಲ್ಲಿ ನಿಧನರಾಗಿದ್ದಾರೆ. ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಉಸಿರು ಚೆಲ್ಲಿದ್ದಾರೆ.

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ(88) ಭಾನುವಾರ ಪೇಜಾವರ ಮಠದಲ್ಲಿ ನಿಧನರಾಗಿದ್ದಾರೆ. ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಉಸಿರು ಚೆಲ್ಲಿದ್ದಾರೆ.
ಡಿಸೆಂಬರ್ 19 ರಂದು ರಾತ್ರಿ 9.30ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನ್ಯುಮೋನಿಯಾ ಇದೆ, ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಸೂಚಿಸಿದರೂ ಶ್ರೀಗಳು ಅಲಕ್ಷ್ಯಿಸಿದರು.
ಬೆಳಗ್ಗೆ ಬೇಗ ದೇವರ ಪೂಜೆ ಮುಗಿಸಿ ಬರುತ್ತೇನೆ ಎಂದು ಮಠಕ್ಕೆ ಹಿಂದಿರುಗಿದ ಶ್ರೀಗಳು, ಬೆಳಗ್ಗೆ ಅದೇ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂದಿದ್ದರು. ಆವೇಳೆಗಾಗಲೇ ಅವರ ಆರೋಗ್ಯ ಗಂಭೀರವಾಗಿತ್ತು ಎಂದು ಹೇಳಲಾಗಿದೆ.
ಡಿ.20ರಂದು ನಸುಕಿನ 3 ಗಂಟೆಗೆ ಪೇಜಾವರ ಶ್ರೀಗಳು ಅಸ್ವಸ್ಥರಾದರು. ನಂತರ ಅವರನ್ನು ಕೆಎಂಸಿಗ ಆಸ್ಪತ್ಕೆಗೆ ದಾಖಲಿಸಲಿಸಲಾಯಿತು, ನ್ಯುಮೋನಿಯಾ ಸೋಂಕು ಪತ್ತೆಯಾಗಿತ್ತು.
ಶ್ರೀಗಳ ಆರೋಗ್ಯ ಗಂಭೀರವಾದ ಮೇಲೆ ವೆಂಟಿಲೇಟರ್ ಅಳವಡಿಸಲಾಯಿತು, ಡಾ. ಸುಧಾ ವಿದ್ಯಾಸಾಗರ ನೇತೃತ್ವದ ವೈದ್ಯರ ತಂಡದಿಂದ ಚಿಕಿತ್ಸೆ ಆರಂಭಿಸಿತು
ಡಿಸೆಂಬರ್ 21ರಂದು ಚಿಕಿತ್ಸೆಗೆ ಸ್ಪಂದಿಸಿದ ಶ್ರೀಗಳು, ಡಿಸೆಂಬರ್ 22ರಂದು ಬೆಂಗಳೂರಿನ ಮಣಿಪಾಲ್ ವೈದ್ಯರ ಆಗಮನ, ಡಿಸೆಂಬರ್ 23ರಂದು ರಕ್ತದೊತ್ತಡ ನಿಯಂತ್ರಣ, ಏಮ್ಸ್ ವೈದ್ಯರ ನೆರವು
ಡಿಸೆಂಬರ್ 24ರಂದು ಚಿಕಿತ್ಸೆಗೆ ಅಲ್ಪ ಸ್ಪಂದನೆ, ಸ್ವಲ್ಪ ಚೇತರಿಕೆ, ಡಿಸೆಂಬರ್ 25ರಂದು ಶ್ವಾಸಕೋಶ ನಿಧಾನವಾಗಿ ಚೇತರಿಕೆ, ಪ್ರಜ್ಞಾಹೀನ ಸ್ಥಿತಿ ತಲುಪಿದ ಶ್ರೀಗಳು.
ಡಿಸೆಂಬರ್ 26ರಂದು ಮತ್ತೆ ಆರೋಗ್ಯ ದಿಢೀರ್ ಏರುಪೇರು, ಗಂಭೀರ, ಡಿಸೆಂಬರ್ 27ರಂದು ಆರೋಗ್ಯ ತೀರಾ ಗಂಭೀರ, ದೇಹಸ್ಥಿತಿ ಇಳಿಮುಖ
ಡಿಸೆಂಬರ್ 28ಕ್ಕೆ ಮಿದುಳು ನಿಷ್ಕ್ರಿಯ. ಡಿಸೆಂಬರ್ 29ರಂದು ಮಠಕ್ಕೆ ಶ್ರೀಗಳ ಸ್ಥಳಾಂತರ. ಬೆಳಗ್ಗೆ 9.20ಕ್ಕೆ ನಿಧನವಾಗಿದ್ದರೆಂದು ಅಧಿಕೃತ ಘೋಷಣೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


