ರಾಜ್ಯ

ಚಿಕ್ಕಮಗಳೂರು: ಚಿಕ್ಕಪ್ಪನ ತಿಥಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣ

ಚಿಕ್ಕಪ್ಪನ ತಿಥಿಗೆಂದು ಬಂದಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಉದ್ದೇಬೋರನಹಳ್ಳಿ ಸಮೀಪ ನಡೆದಿದೆ.

ಚಿಕ್ಕಮಗಳೂರು: ಚಿಕ್ಕಪ್ಪನ ತಿಥಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣ
ಯೋಧ ಚಿದಾನಂದ್
Published On :

ಚಿಕ್ಕಮಗಳೂರು: ಚಿಕ್ಕಪ್ಪನ ತಿಥಿಗೆಂದು ಬಂದಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಉದ್ದೇಬೋರನಹಳ್ಳಿ ಸಮೀಪ ನಡೆದಿದೆ.

ಯೋಧ ಚಿದಾನಂದ್ (27) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಇವರು ಎರಡು ದಿನಗಳ ಹಿಂದಷ್ಟೇ ಚಿಉಕ್ಕಪ್ಪನ ತಿಥಿಗಾಗಿ ಊರಿಗೆ ಆಗಮಿಸಿದ್ದರು.

ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಬಾಳೇನಹಳ್ಳಿ ಗ್ರಾಮದವರಾಗಿದ್ದ ಚಿದಾನಂದ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕಾಮೀರದ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಬುಧವಾರ ಅವರು ತಮ್ಮ ಸ್ವಗ್ರಾಮಕ್ಕೆ ತೆರಳುವಾಗ ಅವರ ಬೈಕ್ ಆಪಘಾತವಾಗಿದೆ. ಆ ನಂತರ ಅವರು ಪಕ್ಕದಲ್ಲಿನ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಚಿದಾನಂದ್ ಮೃತಪಟ್ಟ ವಿಚಾರ ರಸ್ತೆಯಲ್ಲಿ ಸಂಚರಿಸುವವರಿಗೆ ಸಹ ತಿಳಿಯಲಿಲ್ಲ. ಇತ್ತ ಸಂಜೆಯಾಗಿದ್ದರೂ ಮಗ ಮನೆಗೆ ಬಾರದ್ದಕ್ಕೆ ಪೋಷಕರು ಆತಂಕಗೊಂಡಿದ್ದಾರೆ.

ಇಷ್ಟಾಗಿ ಇಪ್ಪತ್ತು ಗಂಟೆಗಳ ತರುವಾತ ಪೋಲೀಸ್ ಶೋಧ ಕಾರ್ಯಾಚರಣೆ ನಡೆದ ನಂತರ ಯೋಧನ ಶವ ಪತ್ತೆಯಾಗಿದೆ. ಘಟನೆ ಕುರಿತಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.