'ರಾಮನನ್ನು ಮಹಾಪುರುಷನನ್ನಾಗಿಸಿದ್ದೇ ವಾಲ್ಮೀಕಿ'
ಅಯೋಧ್ಯೆಯಲ್ಲಿ ರಾಮ ಭವನ ನಿರ್ಮಾಣ ಮಾಡುವಾಗ ದೇವಾಲಯದ ಒಳಗಡೆ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕೆಂದು ನಾಯಕ ಸಮುದಾಯ ಒತ್ತಾಯಿಸಿದೆ.

ಮೈಸೂರು: ಅಯೋಧ್ಯೆಯಲ್ಲಿ ರಾಮ ಭವನ ನಿರ್ಮಾಣ ಮಾಡುವಾಗ ದೇವಾಲಯದ ಒಳಗಡೆ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕೆಂದು ನಾಯಕ ಸಮುದಾಯ ಒತ್ತಾಯಿಸಿದೆ.
ವಾಲ್ಮೀಕಿ ರಾಮಾಯಣ ಬರೆದರು, ಹೀಗಾಗಿ ಅವರ ಪ್ರತಿಮೆ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ರಾಮ ದೇವರ ಹೆಸರಿನ ಜೊತೆ ವಾಲ್ಮೀಕಿ ಹೆಸರನ್ನು ಕಡ್ಡಾಯವಾಗಿ ಬಳಸಬೇಕು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುವುದಾಗಿ ನಾಯಕ ಸಮುದಾಯ ಒತ್ತಾಯಿಸಿದೆ.
ಅಯೋಧ್ಯೆಯ ರಾಮ ಭವನದ ಒಳಗೆ ವಾಲ್ಮೀಕಿ ಭವನ ನಿರ್ಮಿಸುವ ಸಲುವಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಪತ್ರ ಬರೆದು ಅಭಿಯಾನ ಮಾಡುವುದಾಗಿ ವಾಲ್ಮೀಕಿ ನಾಯಕ ಸಮಿತಿ ಅಧ್ಯಕ್ಷ ಭೀಮಪ್ಪ ಹೇಳಿದ್ದಾರೆ.
ಧ್ರೋಣಾಚಾರ್ಯರ ನೆನೆಯದೇ ಹೇಳದೇ ಏಕಲವ್ಯನ ಹೆಸರು ಹೇಳಲು ಸಾಧ್ಯವೇ? ರಾಮನನ್ನು ಮಹಾಪುರಷನ್ನಾಗಿಸಿದ್ದೇ ವಾಲ್ಮೀಕಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 52 ಲಕ್ಷ ವಾಲ್ಮೀಕಿ ಸಮುದಾಯದ ಮಂದಿಯಿದ್ದಾರೆ. ಇಬ್ಬರು 2 ಸಂಸದರು ಹಾಗೂ 17 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಬೇಡಿಕೆಗೆ ಬೆಂಬಲ ನೀಡುವಂತೆ ಪೇಜಾವರ ಸ್ವಾಮಿಗಳಿಗೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


