ರಾಜ್ಯ

ಚಾಮರಾಜನಗರ: ಎನ್ಎಸ್ಎಸ್ ಶಿಬಿರಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲು

ಎನ್ಎಸ್ಎಸ್ ಶಿಬಿರಕ್ಕೆ ತೆರಳಿದ ವಿದ್ಯಾರ್ಥಿಯೋರ್ವ ನೀರುಪಾಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅರೇಪುರದಲ್ಲಿ ನಡೆದಿದೆ.

ಚಾಮರಾಜನಗರ: ಎನ್ಎಸ್ಎಸ್ ಶಿಬಿರಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲು
ಸಂಗ್ರಹ ಚಿತ್ರ
Published On :

ಚಾಮರಾಜನಗರ: ಎನ್ಎಸ್ಎಸ್ ಶಿಬಿರಕ್ಕೆ ತೆರಳಿದ ವಿದ್ಯಾರ್ಥಿಯೋರ್ವ ನೀರುಪಾಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅರೇಪುರದಲ್ಲಿ ನಡೆದಿದೆ.

ಎನ್ಎಸ್ಎಸ್ ಶಿಬಿರಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲುಗುಂಡ್ಲುಪೇಟೆ ತಾಲೂಕಿನ ಚೆನ್ನವಡೆಯನಪುರದ ಅಖಿಲ್(18) ಮೃತ ದುರ್ದೈವಿ. 

ಬೇಗೂರು ಸರ್ಕಾರಿ ‌ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಖಿಲ್ ಅರೇಪುರದಲ್ಲಿ ಏರ್ಪಡಿಸಿದ್ದ ಎನ್ಎಸ್ಎಸ್​ ಶಿಬಿರದಲ್ಲಿ ಭಾಗವಹಿಸಿದ್ದ ವೇಳೆ ಸಂಜೆ ವಾಯುವಿಹಾರಕ್ಕೆ ತೆರಳುತ್ತೇನೆಂದು ಈಜಲು ಹೋಗಿ ಮೃತಪಟ್ಟಿದ್ದಾನೆ.

ಜೊತೆಗೆ ತೆರಳಿದ್ದ ಮತ್ತೋರ್ವ ಅದೃಷ್ಟವಶಾತ್ ಪಾರಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಶವ ಹೊರತೆಗೆದಿದ್ದು, ಮೃತನ ಸಂಬಂಧಿಕರು ಕಾಲೇಜಿನ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದರಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಬೇಗೂರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ವರದಿ: ಗೂಳಿಪುರ ನ೦ದೀಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.