ದಂಡದ ಬದಲು ಹೆಲ್ಮೆಟ್: ಚಾಮರಾಜನಗರ ಪೊಲೀಸರ ಮಾಸ್ಟರ್ ಪ್ಲಾನ್!
ದಂಡ ಹೆಚ್ಚಾದರೂ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರು ತಹಬದಿಗೆ ಬಾರದ ಹಿನ್ನೆಲೆಯಲ್ಲಿ ದಂಡದ ಹಣಕ್ಕೆ ಬದಲು ಸ್ಥಳದಲ್ಲೇ ಹೆಲ್ಮೆಟ್ ನೀಡಲು ಚಾಮರಾಜನಗರ ಪೊಲೀಸರು ನಿರ್ಧರಿಸಿದ್ದಾರೆ.

ಚಾಮರಾಜನಗರ: ದಂಡ ಹೆಚ್ಚಾದರೂ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರು ತಹಬದಿಗೆ ಬಾರದ ಹಿನ್ನೆಲೆಯಲ್ಲಿ ದಂಡದ ಹಣಕ್ಕೆ ಬದಲು ಸ್ಥಳದಲ್ಲೇ ಹೆಲ್ಮೆಟ್ ನೀಡಲು ಚಾಮರಾಜನಗರ ಪೊಲೀಸರು ನಿರ್ಧರಿಸಿದ್ದಾರೆ.
ಸುಮಾರು1500 ರೂ. ಬೆಲೆಬಾಳುವ ಐಎಸ್ ಐ ಮಾರ್ಕಿನ ಹೆಲ್ಮೆಟ್ಗಳನ್ನು ರಿಯಾಯಿತಿ ದರದಲ್ಲಿ 750 ರೂ.ಗೆ ಸವಾರರಿಗೆ ನೀಡುವ ಕಾರ್ಯಕ್ಕೆ ಇಂದು ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದಕುಮಾರ್ ಚಾಲನೆ ನೀಡಿದ್ದಾರೆ.
2017 ಮತ್ತು 2018ರಲ್ಲಿ 162 ಮಂದಿ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಮೃತಪಟ್ಟಿದ್ದು, ಈ ವರ್ಷ 142 ಮಂದಿ ಮೃತಪಟ್ಟಿದ್ದಾರೆ.
2019ರಲ್ಲಿ ಇಲ್ಲಿಯವರೆಗೆ 1.69 ಕೋಟಿ ರೂ. ದಂಡದ ಹಣ ಸಂಗ್ರಹಿಸಿದ್ದರೂ ಗ್ರಾಮೀಣ ಭಾಗದಲ್ಲಿ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಇಂದಿಗೂ ಕಡ್ಡಾಯ ಹೆಲ್ಮೆಟ್ ನಿಯಮ ಪಾಲನೆಯಾಗದಿರುವುದರಿಂದ ರೋಸಿ ಹೋಗಿರುವ ಪೊಲೀಸರು ದಂಡ ಹಾಕುವುದರೊಂದಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡಲು ಮುಂದಾಗಿದ್ದಾರೆ.
ಪೊಲೀಸ್ ಕ್ಯಾಂಟೀನ್ನಲ್ಲಿ ಪ್ರಾರಂಭದಲ್ಲಿ 500 ಹೆಲ್ಮೆಟ್ಗಳನ್ನು ತರಿಸಿದ್ದು, ಈ ಯೋಜನೆ ಫಲಪ್ರದವಾದರೆ ಇದನ್ನು ಇಲಾಖೆ ಮುಂದುವರೆಸಲಿದೆ.
ದಂಡದ ಹಣದ ಬದಲಿಗೆ ಹೆಲ್ಮೆಟ್ ನೀಡುವ ಯೋಜನೆ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಪ್ರಾರಂಭಿಕವಾಗಿ ಇಂದಿನಿಂದ ಹೆಲ್ಮೆಟ್ ನೀಡಲಾಗುತ್ತಿದೆ.
ವರದಿ:- ಗೂಳಿಪುರ ನಂದೀಶ ಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


