ರಾಜ್ಯ

ಗಗನಕ್ಕೇರಿದ ಬೆಲೆ:ಬಾಗಲಕೋಟೆಯಲ್ಲಿ ವಧುವರರ ಕೈಗೆ ದುಬಾರಿ ಈರುಳ್ಳಿ ಗಿಫ್ಟ್!

ದೇಶದಾದ್ಯಂತ ಭಾರಿ ಬೇಡಿಕೆ ಪಡೆದುಕೊಂಡಿರುವ ಈರುಳ್ಳಿ ಇದೀಗ ದುಬಾರಿ ಗಿಫ್ಟ್ ಸಾಲಿಗೆ ಸೇರುವ ಮೂಲಕ ಅಚ್ಚರಿ ಮೂಡಿಸಿದೆ.

ಗಗನಕ್ಕೇರಿದ ಬೆಲೆ:ಬಾಗಲಕೋಟೆಯಲ್ಲಿ ವಧುವರರ ಕೈಗೆ ದುಬಾರಿ ಈರುಳ್ಳಿ ಗಿಫ್ಟ್!
ಗೆಳೆಯರು ನೀಡಿರುವ ಈರುಳ್ಳಿ ಗಿಫ್ಟ್
Published On :

ಬಾಗಲಕೋಟೆ: ದೇಶದಾದ್ಯಂತ ಭಾರಿ ಬೇಡಿಕೆ ಪಡೆದುಕೊಂಡಿರುವ ಈರುಳ್ಳಿ ಇದೀಗ ದುಬಾರಿ ಗಿಫ್ಟ್ ಸಾಲಿಗೆ ಸೇರುವ ಮೂಲಕ ಅಚ್ಚರಿ ಮೂಡಿಸಿದೆ.


ದೇಶದ ಬಹುತೇಕ ಕಡೆಗಳಲ್ಲಿ ಕೆಜಿ 170ರಿಂದ 200 ರೂಗಳವರೆಗೆ ಮಾರಾಟವಾಗುತ್ತಿರುವ ಈರಳ್ಳಿ, ಇತರ ದೇಶಗಳಿಂದ ಆಮದಾಗಿದ್ದರೂ ಬೆಲೆ ಏರಿಕೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ದೇಶಿಯ ಈರುಳ್ಳಿ ಜತೆ ಆಮದು ಈರುಳ್ಳಿ ಕೂಡ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.


ಸದ್ಯ ದೇಶದ ಮಾರುಕಟ್ಟೆಯಲ್ಲಿ ಈಗ ಈರುಳ್ಳಿಯದ್ದೇ ಪಾರುಪತ್ಯ. ಈರುಳ್ಳಿ ಬೆಲೆ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ದಾಖಲೆ ಮಾಡಿದೆ. ನಿತ್ಯವೂ ಬೆಲೆಯ ವಿಷಯದಲ್ಲಿ ತನ್ನದೇ ಹಳೆ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸುತ್ತಿದೆ.


ಏತನ್ಮಧ್ಯೆ ದುಬಾರಿ ಬೆಲೆ ಹೆಸರಾಗಿರುವ ಈರುಳ್ಳಿ  ಅದ್ಧೂರಿ ಸಮಾರಂಭದಲ್ಲಿ ನೀಡುವ ದುಬಾರಿ ಗಿಫ್ಟ್ ಗಳ ಸಾಲಿಗೆ ಸೇರಿದೆ ಎಂದರೆ ಅಚ್ಚರಿಪಡಬೇಡಿ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಮುದುವೆ ಸಮಾರಂಭವೊಂದರಲ್ಲಿ ವಧು-ವರರಿಗೆ ಅವರ ಸ್ನೇಹಿತರು ಈರುಳ್ಳಿ ಬಾಕ್ಸ್ ಗಿಫ್ಟ್ ನೀಡುವ ಮೂಲಕ ಅಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. 


ಗೆಳೆಯರು ಸ್ನೇಹಿತನ ಮದುವೆಗೆ ಈರುಳ್ಳಿ ಗಿಪ್ಟ್ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ಜಿಲ್ಲೆಯಲ್ಲಿ ಎಲ್ಲಿ ನಡೆದಿರುವ ಮದುವೆಯಲ್ಲಿ ಈ ಪ್ರಸಂಗ ನಡೆದಿದೆ ಎನ್ನುವುದು ಮಾತ್ರ ಇನ್ನೂ ನಿಖರವಾಗಿ ಗೊತ್ತಾಗುತ್ತಿಲ್ಲ.ಈರುಳ್ಳಿಯನ್ನು ಮದುವೆಯಲ್ಲಿ ಉಡುಗೋರೆಯಾಗಿ ನೀಡಿರುವುದು ಇಡೀ ಮದುವೆ ಸಮಾರಂಭದಲ್ಲಿ ನಗೆಯನ್ನುಕ್ಕಿಸಿದೆ.

ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.