ರಾಜ್ಯ

ಬಾದಾಮಿ ಚಿತ್ರಕಲಾ ಕೇಂದ್ರ ಸ್ಥಳಾಂತರ: ಸಿದ್ದರಾಮಯ್ಯ ವಿರೋಧ 

ಬಾದಾಮಿಯಲ್ಲಿರುವ ಹಂಪಿ ವಿಶ್ವ ವಿದ್ಯಾಲಯದ ಶಿಲ್ಪ ಮತ್ತು ಚಿತ್ರಕಲಾ ಕೇಂದ್ರವನ್ನು ಎತ್ತಂಗಡಿ ಮಾಡಿ ಆ ಜಾಗದಲ್ಲಿ ಐಷಾರಾಮಿ ಹೊಟೇಲ್ ನಿರ್ಮಿಸುವ ಸರ್ಕಾರದ ಉದ್ದೇಶವನ್ನು ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ‌ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಬಾದಾಮಿ ಚಿತ್ರಕಲಾ ಕೇಂದ್ರ ಸ್ಥಳಾಂತರ: ಸಿದ್ದರಾಮಯ್ಯ ವಿರೋಧ 
ಸಿದ್ದರಾಮಯ್ಯ
Published On :

ಬಾದಾಮಿ: ಬಾದಾಮಿಯಲ್ಲಿರುವ ಹಂಪಿ ವಿಶ್ವ ವಿದ್ಯಾಲಯದ ಶಿಲ್ಪ ಮತ್ತು ಚಿತ್ರಕಲಾ ಕೇಂದ್ರವನ್ನು ಎತ್ತಂಗಡಿ ಮಾಡಿ ಆ ಜಾಗದಲ್ಲಿ ಐಷಾರಾಮಿ ಹೊಟೇಲ್ ನಿರ್ಮಿಸುವ ಸರ್ಕಾರದ ಉದ್ದೇಶವನ್ನು ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ‌ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದು, ಚಿತ್ರಕಲಾಕೇಂದ್ರದ ಅಭಿವೃದ್ಧಿಗೆ ಸಹಕರಿಸಬೇಕೇ ಹೊರತು ಕೇಂದ್ರವನ್ನು ಸ್ಥಳಾಂತರಿಸುವುದು ಸರಿ ಅಲ್ಲ ಎಂದು ಹೇಳಿದ್ದಾರೆ.


ಚುನಾವಣಾ ಪ್ರಚಾರದ ಬಳಿಕ ಮತ ಕ್ಷೇತ್ರ ಬಾದಾಮಿಯ ಅಭಿವೃದ್ಧಿ ಕಾರ್ಯಗಳಲ್ಲಿ ಕಳೆದೆರಡು ದಿನಗಳಿಂದ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ, ಶುಕ್ರವಾರ ಕೆಲ ಶಾಲಾ ಮಕ್ಕಳನ್ನು ಭೇಟಿಯಾದರು. ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.


ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಅಂಗವಾಗಿ ಬಾದಾಮಿಯಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.