ಉಪ ಚುನಾವಣೆ: ಸಂಜೆ 5 ಗಂಟೆ ವರೆಗೆ ಶೇ.60 ರಷ್ಟು ಮತದಾನ, ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು
ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು,....

ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿದೆ.
ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿರುವ ಮತದಾನ ಸಂಜೆ 5 ಗಂಟೆಯವರೆಗೆ ಒಟ್ಟು ಶೇ.60 ರಷ್ಟು ಮತದಾನವಾಗಿದೆ.
ಸಂಜೆ 5 ಗಂಟೆಯವರೆಗೆ ಕ್ಷೇತ್ರವಾರು ಮತದಾನದ ವಿವರ ಹೀಗಿದೆ
ಅಥಣಿ- ಶೇ.70.73
ಕಾಗವಾಡ- ಶೇ.69.76
ಗೋಕಾಕ್- ಶೇ.66.64
ಯಲ್ಲಾಪುರ- ಶೇ.72.23
ಹಿರೇಕೆರೂರು- ಶೇ.72.42
ರಾಣೇಬೆನ್ನೂರು- ಶೇ.67.92
ವಿಜಯನಗರ- ಶೇ.59.93
ಚಿಕ್ಕಬಳ್ಳಾಪುರ- ಶೇ.79.08
ಕೆ.ಆರ್ ಪುರಂ- ಶೇ.37.05
ಯಶವಂತಪುರ- ಶೇ.48.34
ಮಹಾಲಕ್ಷ್ಮಿ ಲೇಔಟ್- ಶೇ.40.47
ಶಿವಾಜಿನಗರ- ಶೇ.41.13
ಹೊಸಕೋಟೆ- ಶೇ.76.19
ಕೆ.ಆರ್ ಪೇಟೆ- ಶೇ.75.87
ಹುಣಸೂರು- ಶೇ.74.47
ಈ ಪೈಕಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಗರಿಷ್ಠ ಪ್ರಮಾಣದ ಮತದಾನ ನಡೆದಿದ್ದು, ಕೆಆರ್ ಪುರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


