ಬಾಗಿನದಲ್ಲೂ ಮಲತಾಯಿ ಧೋರಣೆ: ಕೆಆರ್ ಎಸ್ ಗೆ ಮಾತ್ರ ಬಾಗಿನ, ಆಲಮಟ್ಟಿಗೆ ಏಕಿಲ್ಲ?
ಇತ್ತೀಚೆಗೆ ಸುರಿದ ಮಳೆಯಿಂದ ಭರ್ತಿಗೊಂಡಿದ್ದ ಕೆಆರ್ ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ, ಆದರೆ ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ನೀಡದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿಜಯಪುರ: ಇತ್ತೀಚೆಗೆ ಸುರಿದ ಮಳೆಯಿಂದ ಭರ್ತಿಗೊಂಡಿದ್ದ ಕೆಆರ್ ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ, ಆದರೆ ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ನೀಡದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಾಗಲಕೋಟೆಯಲ್ಲಿರುವ ಆಲಮಟ್ಟಿ, ರಾಜ್ಯದ ಅತಿ ದೊಡ್ಡ ಜಲಾಶಯ, ಮಳೆಯಿಂದಾಗಿ ಈ ಜಲಾಶಯ ಕೂಡ ತುಂಬಿ ತುಳುಕುತ್ತಿದೆ,. ರಾಜ್ಯ ಸರ್ಕಾರ ಕೇವಲ ಕೆಆರ್ ಎಸ್ ಗೆ ಮಾತ್ರ ಬಾಗಿನ ಅರ್ಪಿಸಿದೆ. ಆಲಮಟ್ಟಿ ಜಲಾಶಯಕ್ಕೆ ಏಕಿಲ್ಲ ಎಂದು ಈ ಭಾಗದ ರೈತರು ಪ್ರಶ್ನಿಸಿದ್ದಾರೆ.
ಕೆಆರ್ ಎಸ್ ಗಿಂತ ಆಲಮಟ್ಟಿ ದೊಡ್ಡ ಜಲಾಶಯವಾಗಿದೆ, ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ, ಇದಕ್ಕೂ ಹಿಂದಿದ್ದ ಸರ್ಕಾರಗಳು ಕೂಡ ಇದೇ ರೀತಿ ತಾರತಮ್ಯ ಮಾಡಿಕೊಂಡು ಬಂದಿವೆ, ಬಹಳ ಹಿಂದಿನಿಂದಲೂ ಮಲತಾಯಿ ಧೋರಣೆ ನಡೆಯುತ್ತಿದೆ ಎಂದು ಕರ್ನಾಟರ ರೈತ ಸಂಘದ ಕಾರ್ಯದರ್ಶಿ ಆರವಿಂದ್ ಕುಲಕರ್ಣಿ ಆರೋಪಿಸಿದ್ದಾರೆ. ಜೊತೆಗೆ ತುಂಗಭದ್ರಾ ಜಲಾಶಯ ಕೂಡ ತುಂಬಿದ್ದು, ಸರ್ಕಾರ ಇದನ್ನು ನಿರ್ಲಕ್ಷ್ಯಿಸಿದೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


