ಬಳ್ಳಾರಿ: ಮಲಗಿದ್ದ ವೇಳೆ ಮನೆ ಮೇಲ್ಛಾವಣಿ ಕುಸಿತ; ಮೂವರ ಸಾವು
ರಾತ್ರಿ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗದಲ್ಲಿ ನಡೆದಿದೆ.

ಬಳ್ಳಾರಿ: ರಾತ್ರಿ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗದಲ್ಲಿ ನಡೆದಿದೆ.
ನಾಡಂಗ ಗ್ರಾಮದ ಖಾದರ್ ಬಾಷಾ ಎಂಬುವರ ಕಚ್ಚಾಮನೆಯು ಏಕಾಏಕಿ ಕುಸಿತ ಕಂಡಿದ್ದು, ಮನೆಯೊಳಗೆ ಮಲಗಿದ್ದ ಇಮಾಮ್ ಬೀ (45), ಹಸೀನಾ (25), ಇಮ್ರಾನ್ (3) ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.
ಆಗಾಗ ಮಳೆ ಸುರಿದ ಪರಿಣಾಮ ಈ ಮನೆಯು ಶಿಥಿಲಾವಸ್ಥೆಗೆ ತಲುಪಿದ್ದು, ಉಳಿದು ಕೊಳ್ಳಲು ಸೂರಿಲ್ಲದೇ ಅದೇ ಮನೆಯಲ್ಲೇ ನಿನ್ನೆಯ ರಾತ್ರಿ ಈ ಮೂವರು ಮಲಗಿದ್ದರು. ನಿನ್ನೆಯ ದಿನ ರಾತ್ರಿ 12ಗಂಟೆಯ ಸುಮಾರಿಗೆ ಕಚ್ಚಾಮನೆಯು ಸಂಪೂರ್ಣವಾಗಿ ಕುಸಿದಿದೆ. ಅದೃಷ್ಟ ವಶಾತ್ ತಾಯಿಯ ಪಕ್ಕದಲ್ಲಿ ಮಲಗಿದ್ದ ಹಸುಗೂಸು ದುರಂತದಿಂದ ಪಾರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


