ರಾಯಚೂರು: ಕಾಲುವೆ ನೀರಿಗಾಗಿ ವೃದ್ದನ ಬರ್ಬರ ಹತ್ಯೆ!
ಕಾಲುವೆ ನೀರಿನ ವಿಚಾರಕ್ಕೆ ಜಗಳ ತೆಗೆದು ವೃದ್ಧನೋರ್ವನನ್ನು ದಾಯಾದಿಗಳೇ ಕೊಲೆ ಮಾಡಿರುವ ಘಟನೆ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ

ರಾಯಚೂರು: ಕಾಲುವೆ ನೀರಿನ ವಿಚಾರಕ್ಕೆ ಜಗಳ ತೆಗೆದು ವೃದ್ಧನೋರ್ವನನ್ನು ದಾಯಾದಿಗಳೇ ಕೊಲೆ ಮಾಡಿರುವ ಘಟನೆ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ
ಶಿವರುದ್ರಪ್ಪ(65) ಕೊಲೆಯಾದವರು. ದಾಯಾದಿಗಳಿಬ್ಬರ ಜಮೀನು ಅಕ್ಕ ಪಕ್ಕದಲ್ಲಿದ್ದವು. ಹಳೇ ವೈಷಮ್ಯದ ಹಿನ್ನೆಲೆ ನೀರು ಬಿಡದ ಕಾರಣ ಅಮರೇಶ್ ಹಾಗೂ ಇತರೆ 8 ಜನರು ಜಗಳ ತೆಗೆದು ಮಾರಕಾಸ್ತ್ರದಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹಲ್ಲೆ ವೇಳೆ ಮೃತರ ಮಗ ಶರಣಬಸಪ್ಪ ಅವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮರೇಶ್ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


