ರಾಜ್ಯ

ರಕ್ಷಾ ಬಂಧನದಂದು ರಕ್ತಪಾತ! ತಂಗಿ ಭೇಟಿಯಾಗಲು ಬಂದ ಅಣ್ಣನ ಬರ್ಬರ ಹತ್ಯೆ

ರಕ್ಷಾಬಂಧನಕ್ಕೆ ತಂಗಿಯನ್ನು ಕಾಣಲು ಬಂದ ಅಣ್ಣನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕಾಮರೆಡ್ಡಿ ಆಸ್ಪತ್ರೆ ಬಳಿ ಗುರುವಾರ ತಡರಾತ್ರಿ ನಡೆದಿದೆ.

ರಕ್ಷಾ ಬಂಧನದಂದು ರಕ್ತಪಾತ! ತಂಗಿ ಭೇಟಿಯಾಗಲು ಬಂದ ಅಣ್ಣನ ಬರ್ಬರ ಹತ್ಯೆ
ರವಿ ಚಿಂಚೋಳಿ
Published On :

ಕಲಬುರಗಿ:  ರಕ್ಷಾಬಂಧನಕ್ಕೆ  ತಂಗಿಯನ್ನು ಕಾಣಲು ಬಂದ ಅಣ್ಣನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕಾಮರೆಡ್ಡಿ ಆಸ್ಪತ್ರೆ ಬಳಿ ಗುರುವಾರ ತಡರಾತ್ರಿ ನಡೆದಿದೆ.

ಆಳಂದ‌ಪಟ್ಟಣದ ನಿವಾಸಿ ರವಿ ಚಿಂಚೋಳಿ (35) ಕೊಲೆಯಾದ ದುರ್ದೈವಿ. ಇವರು ನಿನ್ನೆ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಸಹೋದರಿಯ ಯೋಗ-ಕ್ಷೇಮ ವಿಚಾರಿಸಲು ಕಾಮರೆಡ್ಡಿ ಆಸ್ಪತ್ರೆಗೆ ತೆರಳಿದ್ದರು.

ರಾತ್ರಿ ವೇಳೆಯಲ್ಲಿ ಆಸ್ಪತ್ರೆಯ ಮುಂದಿರುವ ಉದ್ಯಾನವನದಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

ಘಟನೆ ಕುರಿತಂತೆ  ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.