ಕೆಎಸ್‌ಆರ್‌ಟಿಸಿ ಅಂಬಾರಿ ಡ್ರೀಮ್ ಕ್ಲಾಸ್ ಸೇವೆಗೆ ಏಷ್ಯಾ ಬ್ರಾಂಡ್ ಎಕ್ಸಲೆನ್ಸ್ ಪ್ರಶಸ್ತಿ
ಕೆಎಸ್ಆರ್ ಟಿಸಿಯು ಇತ್ತೀಚೆಗೆ ನೂತನವಾಗಿ ಕಾರ್ಯಾಚರಣೆಗೊಳಿಸಿರುವ ಬಸ್ಸಿನ ಬ್ರಾಂಡ್ "ಅಂಬಾರಿ ಡ್ರೀಮ್ ಕ್ಲಾಸ್ - ಕನಸಿನೊಂದಿಗೆ ಪ್ರಯಾಣಿಸಿ " ಉಪಕ್ರಮವು ಅಂತಾರಾಷ್ಟ್ರೀಯ ಸಿ ಎಮ್ ಒ ಬ್ರಾಡಿಂಗ್ ಎಕ್ಸ್ ಲೆನ್ಸ್ ಸಪ್ಲೈ ಚೈನ್ ಆಂಡ್..

ಬೆಂಗಳೂರು: ಕೆಎಸ್ಆರ್ ಟಿಸಿಯು ಇತ್ತೀಚೆಗೆ ನೂತನವಾಗಿ ಕಾರ್ಯಾಚರಣೆಗೊಳಿಸಿರುವ ಬಸ್ಸಿನ ಬ್ರಾಂಡ್ "ಅಂಬಾರಿ ಡ್ರೀಮ್ ಕ್ಲಾಸ್ - ಕನಸಿನೊಂದಿಗೆ ಪ್ರಯಾಣಿಸಿ " ಉಪಕ್ರಮವು ಅಂತಾರಾಷ್ಟ್ರೀಯ ಸಿ ಎಮ್ ಒ ಬ್ರಾಡಿಂಗ್ ಎಕ್ಸ್ ಲೆನ್ಸ್ ಸಪ್ಲೈ ಚೈನ್ ಆಂಡ್ ಲಾಜಿಸ್ಟಿಕ್ಸ್ ವರ್ಗದ ಪ್ರಶಸ್ತಿಗೆ ಭಾಜನವಾಗಿದೆ.
ಸಿಎಂಒ ಏಷ್ಯಾವು ಜಾಗತಿಕ ಮಟ್ಟದ ಬ್ರಾಡಿಂಗ್ ಕ್ಷೇತ್ರದ ಜಾಲವಾಗಿದ್ದು, ಬ್ರಾಡಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಜ್ಞಾನ ವಿನಿಮಯ ನಾಯಕತ್ವದ ವೇದಿಕೆಯಾಗಿದೆ. ಬ್ರಾಡಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳ ಮುಖ್ಯಸ್ಥರು , ಬ್ರಾಂಡ್ ಪಾಲಕರು ಮತ್ತು ಸೃಜನಶೀಲ ನಾಯಕತ್ವವನ್ನು ಪ್ರೋತ್ಸಾಹಿಸಿ, ಗುರುತಿಸುವ ವ್ಯವಸ್ಥೆ ಇದಾಗಿದೆ.
ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಸಿಎಂಒ ಏಷ್ಯಾ ಸಿಂಗಾಪುರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


