ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಗ್ರಾಮಸ್ಥರ ಆಕ್ರೋಶ
ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬೆಂಬಲಿಗರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿದೆ.

ಕೊಡಗು: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬೆಂಬಲಿಗರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿದೆ.
ಕೊಡಗಿನಲ್ಲಿ ಪ್ರವಾಹಪೀಡಿತರಿಗೆ ಶಾಸಕರಾದ ಅಪ್ಪಚ್ಚು ರಂಜನ್ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ. ಸಹಾಯ ನೀಡಲು ಶ್ರೀಮಂತ ಬಡವ ಎಂಬ ಬೇಧಭಾವ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುಡ್ಡೆಹೊಸೂರು ತೆಪ್ಪದಗಕಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಕಾವೇರಿ ನೀರಿನ ರಭಸಕ್ಕೆ ತೆಪ್ಪದಕಂಡಿ ಗ್ರಾಮದಲ್ಲಿ 4 ಮನೆಗಳು ಕುಸಿದು ಬಿದ್ದಿದ್ದು, ಮನೆ ಸಾಮಾಗ್ರಿಗಳನ್ನು ಜನರನ್ನು ತೆರವುಗೊಳಿಸಲು ಶಾಸಕರಾಗಲೀ ಅಥವಾ ಅವರ ಕಡೆಯವರಾಗಲೀ ಆಗಮಿಸಿರಲಿಲ್ಲ. ಯಾರ ನೆರವು ಇಲ್ಲದೇ ಇದ್ದುದ್ದರಿಂದ ಗ್ರಾಮಸ್ಥರೇ ಸಾಮಾಗ್ರಿಗಳನ್ನೆಲ್ಲ ತೆರವುಗೊಳಿಸಿದ್ದರು. ಆದರೆ ಇಂದು ಎರಡು ಜೀಪ್ ನಲ್ಲಿ ಅಪ್ಪಚ್ಚು ರಂಜನ್ ಭಾವಚಿತ್ರ ಅಂಟಿಸಿಕೊಂಡು ಅವರ ಬೆಂಬಲಿಗರು ತೆಪ್ಪದಕಂಡಿ ಗ್ರಾಮಕ್ಕೆ ಆಗಮಿಸಿದ್ದನ್ನು ಕಂಡ ಗ್ರಾಮಸ್ಥರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


