ರಾಜ್ಯ

ಮಳೆ ಪ್ರವಾಹದಿಂದ ಹಾಸನದಲ್ಲಿ 105 ಕೋಟಿ ರು ಮೌಲ್ಯದ ಆಸ್ತಿಗೆ ಹಾನಿ: ಬಿಜೆಪಿ

ರಾಜ್ಯದಲ್ಲಿ ಉಂಟಾಗುತ್ತಿರುವ ಘನಘೋರ ಜಲಪ್ರಳಯದಿಂದಾಗ ಹಾಸನ ಜಿಲ್ಲೆಯಲ್ಲಿ ಸುಮಾರು 105 ಕೋಟಿ ರು ಮೌಲ್ಯದ ಆಸ್ತಿಗೆ ಹಾನಿಯಾಗಿದೆ ಎಂದು ಬಿಜೆಪಿ .

ಮಳೆ ಪ್ರವಾಹದಿಂದ ಹಾಸನದಲ್ಲಿ 105 ಕೋಟಿ ರು ಮೌಲ್ಯದ ಆಸ್ತಿಗೆ ಹಾನಿ: ಬಿಜೆಪಿ
Published On :

ಹಾಸನ:  ರಾಜ್ಯದಲ್ಲಿ ಉಂಟಗಾುತ್ತಿರುವ ಘನಘೋರ ಜಲಪ್ರಳಯದಿಂದಾಗ ಹಾಸನ ಜಿಲ್ಲೆಯಲ್ಲಿ ಸುಮಾರು 105 ಕೋಟಿ ರು ಮೌಲ್ಯದ ಆಸ್ತಿಗೆ ಹಾನಿಯಾಗಿದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಪ್ರವಾಹ ಪರಿಶೀಲನೆಗಾಗಿ ಹಾಸನಕ್ಕೆ ತೆರಳಿದ್ದ ಅವರು ಸುದ್ದಿಗಾರರೊಂದಿಗ ಮಾತನಾಡಿದರು ಈ ವೇಳೆ ಪ್ರವಾಹದಿಂದ  ಪರಿಹಾರ ಕಾರ್ಯಗಳು ವಿಳಂಬವಾಗುವುದಿಲ್ಲ, ಅವಶ್ಯಕತೆಯಿರುವಷ್ಟು ಪರಿಹಾರ ಹಣವನ್ನು ರಿಲೀಸ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಹಾನಿಯಾಗಿರುವ ಮೌಲ್ಯಕ್ಕಿಂತ 5 ಕೋಟಿ ರು ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಕರ್ನಾಟಕಕ್ಕೆ 128 ಕೋಟಿ ರು ಹಣ ಬಿಡುಗೆಡೆ ಮಾಡಿದೆ ಎಂದು ಶಾಸಕ ವಿ.ಸೋಮಣ್ಣ ತಿಳಿಸಿದ್ದಾರೆ. ಹಾಸನದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇದುವರೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.