ಆಗಲ್ಲ, ಆಗಲ್ಲ, 10 ಗಂಟೆಗೆ ಕಚೇರಿಗೆ ಬರೋಕೆ ಸಾಧ್ಯವೇ ಇಲ್ಲ: ಸರ್ಕಾರಿ ನೌಕರರ ಪತ್ರ
ನಮಗೆ ಸರಿಯಾಗಿ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ...

Published On :
ಬೆಂಗಳೂರು: ನಮಗೆ ಸರಿಯಾಗಿ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ದಿನಕ್ಕೆ 7.30 ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ.
ಬೆಂಗಳೂರಿನ ಟ್ರಾಫಿಕ್ನಲ್ಲಿ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ಈ ಎಲ್ಲ ಕಾರಣಗಳಿಂದ ನಮಗೆ ಕಚೇರಿಗೆ 10 ಗಂಟೆಯೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಮಯವನ್ನು ಚೇಂಜ್ ಮಾಡಿ ಎಂದು ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ.
ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10.00ರಿಂದ ಸಂಜೆ 5.30 ಗಂಟೆಯಾಗಿದ್ದು, ನೌಕರರು ದಿನದಲ್ಲಿ 7.30 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಚಿವಾಲಯವು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರುಗಳ ಆರೋಗ್ಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Vidhana Soudhaವಿಧಾನ ಸೌಧಸರ್ಕಾರಿ ನೌಕರರುಮುಖ್ಯ ಕಾರ್ಯದರ್ಶಿChief SecretaryGovernment employees10 AM10 ಗಂಟೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


