ರಾಜ್ಯ

ಚಿತ್ರದುರ್ಗ: ನಿರಂತರ ಅತ್ಯಾಚಾರಗೈದು ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿ, ಶಿಶುವನ್ನು ಹೂತು ಹಾಕಿದ ಪಾಪಿ ತಂದೆ!

ಅಪ್ರಾಪ್ತ ಮಗಳನ್ನೇ ನಿರಂತರವಾಗಿ ತಮ್ಮ ಕಾಮತೃಷೆಗೆ ಬಳಿಸಿಕೊಂಡ ಪಾಪಿ ತಂದೆ ಆಕೆಯನ್ನು ಗರ್ಭೀಣಿ ಮಾಡಿ ಕೊನೆಗೆ ಮೃತ ಶಿಶುವನ್ನು ಹೂತು ಹಾಕಿರುವ ಘಟನೆ ನಡೆದಿದೆ.

ಚಿತ್ರದುರ್ಗ: ನಿರಂತರ ಅತ್ಯಾಚಾರಗೈದು ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿ, ಶಿಶುವನ್ನು ಹೂತು ಹಾಕಿದ ಪಾಪಿ ತಂದೆ!
ಸಂಗ್ರಹ ಚಿತ್ರ
Published On :
ಧರ್ಮಪುರ(ಚಿತ್ರದುರ್ಗ): ಅಪ್ರಾಪ್ತ ಮಗಳನ್ನೇ ನಿರಂತರವಾಗಿ ತಮ್ಮ ಕಾಮತೃಷೆಗೆ ಬಳಿಸಿಕೊಂಡ ಪಾಪಿ ತಂದೆ ಆಕೆಯನ್ನು ಗರ್ಭೀಣಿ ಮಾಡಿ ಕೊನೆಗೆ ಮೃತ ಶಿಶುವನ್ನು ಹೂತು ಹಾಕಿರುವ ಘಟನೆ ನಡೆದಿದೆ. 
ನಾಲ್ಕು ವರ್ಷಗಳ ಹಿಂದೆ ಪತ್ನಿ ಮೃತಪಟ್ಟಿದ್ದು ಬಳಿಕ ಹಿರಿಯ ಮಗಳನ್ನು ನಿರಂತರವಾಗಿ ಕಾಮತೃಷೆಗೆ ಬಳಿಸಿಕೊಂಡಿದ್ದಾನೆ. ಮದ್ಯ ಸೇವಿಸಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದು ಆಕೆ ಗರ್ಭಿಣಿ ಎಂದು ತಿಳಿದ ನಂತರ ಆಕೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ. 
ಏಪ್ರಿಲ್ 16ರಂದು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ ಸಂದರ್ಭದಲ್ಲೇ ಬಾಲಕಿ ಶಿಶುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯ ತಿಳಿದ ಗ್ರಾಮಸ್ಥರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಎನ್ಜಿಒ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಇನ್ನು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ಶಿಶುವನ್ನು 2 ಕಿ.ಮೀ ದೂರದಲ್ಲಿ ಹೂತು ಹಾಕಿದ್ದಾನೆ. ಪೊಲೀಸರ ತನಿಖೆ ನಡೆಸಿದಾಗ ಶಿಶುವನ್ನು ಹೂತು ಹಾಕಿದ್ದ ಸ್ಥಳದಲ್ಲಿ ಗೋಣಿ ಚೀಲ ಮಾತ್ರ ಪತ್ತೆಯಾಗಿದೆ. ಇನ್ನು ಶಿಶುವಿನ ಮೃತದೇಹವನ್ನು ಪ್ರಾಣಿಗಳು ತಿಂದು ಹಾಕಿದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.