ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳ್ಳತನ
: ಬಳ್ಲಾರಿ ಜಿಲ್ಲೆ ಕೂಡ್ಲಗಿ ಬಿಜೆಪಿ ಶಾಸಕರ ಚಿತ್ರದುರ್ಗ ನಿವಾಸದಲ್ಲಿ ಕಳ್ಳತನವಾಗಿದೆ.

Published On :
ಚಿತ್ರದುರ್ಗ: ಬಳ್ಲಾರಿ ಜಿಲ್ಲೆ ಕೂಡ್ಲಗಿ ಬಿಜೆಪಿ ಶಾಸಕರ ಚಿತ್ರದುರ್ಗ ನಿವಾಸದಲ್ಲಿ ಕಳ್ಳತನವಾಗಿದೆ.
ಶಾಸಕ ಗೋಪಾಲಕೃಷ್ಣ ಅವರಿಗೆ ಸೇರಿದ್ದ ಬಾಡಿಗೆ ಮನೆಯ ಬಾಗಿಲು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲೆಲ್ಲಾ ಹುಡುಕಿ ಕಡೆಗೆ ಐದು ಸಾವಿರ ನಗದು ಹಣವನ್ನು ಕದ್ದು ಪಾರಾರಿಯಾಗಿದ್ದಾರೆ.
ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿ ಇರುವ ಶಾಸಕರ ಬಾಡಿಗೆ ನಿವಾಸದಲ್ಲಿ ಈ ಪ್ರಕರಣ ನಡೆದಿದೆ. ಚಿತ್ರದುರ್ಗಕ್ಕೆ ಆಗಾಗ ಬೌತ್ತಿದ್ದ ಶಾಸಕರು ಇಲ್ಲಿಗೆ ಬಂದಾಗಲೆಲ್ಲಾ ಉಳಿದುಕೊಳ್ಳುವ ಸಲುವಾಗಿ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು.
ಈಗ ಚುನಾವಣೆ ಸಮಯವಾಗಿರುವ ಕಾರಣ ಶಾಸಕರ ಮನೆ ಕಳ್ಳತನ ನಡೆಸಿದರೆ ಕೋಟಿಗಟ್ಟಲೆ ಹಣ ಸಿಗುತ್ತದ ಎಂದು ಭಾವಿಸಿದ ದುಷ್ಕರ್ಮಿಗಳು ಶನಿವಾರ ಬೆಳಗಿನ ಜಾವ ಶಾಸಕರ ಮನೆಗೆ ನುಗ್ಗಿ ಜಾಲಾಡಿದ್ದಾರೆ. ಆದರೆ ಬೀರುವುನಲ್ಲಿದ್ದ ಐದು ಸಾವಿರ ನಗದು ಹೊರತು ಅವರಿಗೆ ಇನ್ನೇನೂ ದೊರಕಿಲ್ಲ.
ಘಟನೆ ಮಾಹಿತಿ ಪಡೆದ ಕೋಟೆ ಠಾಣೆ ಪೊಲೀಸರು ಸ್ಥಳಕಾಗಮಿಸಿ ಪರಿಶೀಲನೆ ನಡೆಸಿದ್ದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


