ರಾಜಕೀಯ ನಾಯಕರಿಗೆ ಬೆಂಬಲ: ಓರ್ವ ಎಸಿಪಿ, ಮೂವರು ತನಿಖಾಧಿಕಾರಿಗಳ ವರ್ಗಾವಣೆ
ಸಾರ್ವಜನಿಕರಿಂದ ಹೆಚ್ಚು ಸಂಖ್ಯೆಯ ದೂರು ಕೇಳಿಬಂದ ನಂತರ ಪೊಲೀಸ್ ಸಹಾಯಕ ಕಮೀಷನರ್ ಮತ್ತು ಮೂರು ಪೋಲಿಸ್ ತನಿಖಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Published On :
ಬೆಂಗಳೂರು: ಸಾರ್ವಜನಿಕರಿಂದ ಹೆಚ್ಚು ಸಂಖ್ಯೆಯ ದೂರು ಕೇಳಿಬಂದ ನಂತರ ಪೊಲೀಸ್ ಸಹಾಯಕ ಕಮೀಷನರ್ ಮತ್ತು ಮೂರು ಪೋಲಿಸ್ ತನಿಖಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಆಡಳಿತ ಪಕ್ಷದ ರಾಜಕೀಯ ನಾಯಕರ ಬೆಂಬಲಿಗರಾಗಿದ್ದಾರೆ, ಒಂದೇ ದೃಷ್ಟಿಕೋನದ ತನಿಖೆ, ಫಿರ್ಯಾದುದಾರರಿಗೆ ಬೆದರಿಕೆ, ರಾಜಕಾರಣಿಗಳನ್ನು ಬೆಂಬಲಿಸುವುದು ಸೇರಿ ಅನೇಕ ಆರೋಪಗಳು ಇವರ ಮೇಲಿದೆ.
ಮುಖ್ಯ ಚುನಾವಣಾಧಿಕಾರಿ (ಸಿಇಒ) ಸಂಜೀವ್ ಕುಮಾರ್ ಇತ್ತೀಚೆಗೆ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಹಾಗೂ ಅವರ ವಿರುದ್ಧ ಜಂಟಿ ತನಿಖಾ ಸಮಿತಿ ರಚಿಸಲು ಶಿಫಾರಸು ಮಾಡಿದ್ದರು.
ಯಶವಂತಪುರ ಉಪವಿಭಾಗದ ಪೊಲೀಸ್ ಸಹಾಯಕ ಕಮೀಶನರ್ ರವಿಪ್ರಸಾದ್ ಪಿ ಮತ್ತು ಪೊಲೀಸ್ ತನಿಖಾಧಿಕಾರಿಗಳಾದ ವಿ.ಟಿ.ಶ್ರೀನಿವಾಸ (ಪೀಣ್ಯ ಪೊಲೀಸ್ ಠಾಣೆ), ಶಿವರೆಡ್ಡಿ (ಜ್ಞಾನಭಾರತಿ ಪೊಲೀಸ್ ಠಾಣೆ) ಮತ್ತು ಮುದ್ದುರಾಜ್ ವೈ (ಯಶವಂತಪುರ ಪೊಲೀಸ್ ಠಾಣೆ) ವರ್ಗಾವಣೆಗೊಂಡ ಅಧಿಕಾರಿಗಳಾಗಿದ್ದಾರೆ.
ಈ ಹಿಂದೆ ಸಿಇಒ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಕೇಳಿದರು. ಆದರೆ ನೀಲಮಣಿ ರಾಜು ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಆ ಕಾರಣದಿಂದಾಗಿ ಸಿಇಒ ಮತ್ತೆ ಅದೇ ಅಧಿಕಾರಿಗಳ ವಿರುದ್ಧ ಏಪ್ರಿಲ್ 12 ರಂದು ಐಎ ಐಎಎಸ್ ಅಧಿಕಾರಿ ಶಿವಯೋಗಿ ಗಿ ಸಿ ಕಲ್ಸಾದ್ ಮತ್ತು ಐಜಿಪಿ ರೂಪಾ ಡಿ ಮೌಡ್ಗಿಲ್ ಒಳಗೊಂಡ ಜಂಟಿ ತನಿಖಾ ಸಮಿತಿಗೆ ಶಿಫಾರಸು ಮಾಡಿದ್ದಾರೆ.ಕಲ್ಸಾದ್ ಮತ್ತು ಮೌಡ್ಗಿಲ್ ಏಪ್ರಿಲ್ 15 ರಂದು ತನಿಖೆಯನ್ನು ಪೂರ್ಣಗೊಳಿಸಿದರು ಮತ್ತು ಅಧಿಕಾರಿಗಳು ತಪ್ಪಿತಸ್ಥರು ಎಂಬುದನ್ನು ಕಂಡುಕೊಂಡರು.ವರದಿಯನ್ನು ಸಿಇಒಗೆ ಸಲ್ಲಿಸಲಾಯಿತು, ಅದರ ನಂತರ ಡಿ.ಜಿ. ಮತ್ತು ಐಜಿಪಿ ನೀಲಮಣಿ ಎನ್ ರಾಜು ರವಿಪ್ರಸಾದ್ ಅವರನ್ನು ಸಿಐಡಿ, ಶಿವರೆಡ್ಡಿಯವರನ್ನು ರಾಜ್ಯ ಗುಪ್ತಚರ, ಶ್ರೀನಿವಾಸ್ ಸಿಐಡಿಗೆ ಹಾಗೂ ಮುದ್ದುರಾಜ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಲೋಕಸಭಾ ಚುನಾವಣೆLok Sabha pollsIndian Administrative ServiceSanjiv Kumarಸಂಜೀವ್ ಕುಮಾರ್Chief Electoral Officerಮುಖ್ಯ ಚುನಾವಣಾ ಅಧಿಕಾರಿಭಾರತೀಯ ಆಡಳಿತಾತ್ಮಕ ಸೇವೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


