ಉಡುಪಿ: ಕನ್ನಡದಲ್ಲಿ ಫೇಲ್ ಆದೆ ಅಂತ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ!
ಸೋಮವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನದ ಅಂಕ (ಫಸ್ಟ್ ಕ್ಲಾಸ್ ಮಾರ್ಕ್) ಪಡೆದಿದ್ದೂ ಕನ್ನಡದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು....

Published On :
ಉಡುಪಿ: ಸೋಮವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನದ ಅಂಕ (ಫಸ್ಟ್ ಕ್ಲಾಸ್ ಮಾರ್ಕ್) ಪಡೆದಿದ್ದೂ ಕನ್ನಡದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಬ್ರಹ್ಮಾವರ ನಾಲ್ಕೂರು ಗ್ರಾಮ ನಡ್ಕೇರಿ ಮೇಲ್ಮನೆ ನಿವಾಸಿ ಪ್ರಜ್ಞಾ ಶೆಟ್ಟಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಪ್ರಜ್ಞಾ, ಬ್ರಹ್ಮಾವರದ ಬೋರ್ಡ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಳು. ಸೋಮವಾರ ಫಲಿತಾಶ ಗೋಷಣೆಯಾಗಿದ್ದು ಬೆಂಗಳುರಿನಲ್ಲಿದ್ದ ಆಕೆಯ ಸಂಬಂಧಿಕರು ಫಲಿತಾಂಶ ನೋಡಿದಾಗ ಕನ್ನಡದಲ್ಲಿ 4 ಅಂಕ ಅಗಳಿಸಿ ಅನುತ್ತೀರ್ಣಳಾಗಿದ್ದು ತಿಳಿದಿದೆ.
ಬೇರೆಲ್ಲಾ ವಿಷಗಳಲ್ಲಿ 60ಕ್ಕಿಂತ ಹೆಚ್ಚು ಅಂಕ ಪಡೆದಿದ್ದ ಪ್ರಜ್ಞಾಗೆ ಕನ್ನಡದಲ್ಲಿ ಕಡಿಮೆ ಅಂಕ ಬಂದಿದ್ದು ಮನಸ್ಸಿಗೆ ಆಘಾತ ನಿಡಿದೆ. ಮನೆಯಲ್ಲಿ ತಾಯಿ, ಅಜ್ಜಿ ಇರುವ ವೇಳೆಯೇ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಕುರಿತು ಹೆಬ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


