ಮೂಡಬಿದಿರೆ: ಪ್ರೇಯಸಿಗೆ ಚೂರಿಯಿಂದ ಇರಿದು ಆಕೆಯ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಪ್ರಿಯಕರ!
ತಾನು ಪ್ರೀತಿಸುತ್ತಿದ್ದ ಯುವತಿಗೆ ಚೂರಿಯಿಂದ ಇರಿದ ಯುವಕನೊಬ್ಬ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿ ನಡೆದಿದೆ.

Published On :
ಮೂಡಬಿದಿರೆ: ತಾನು ಪ್ರೀತಿಸುತ್ತಿದ್ದ ಯುವತಿಗೆ ಚೂರಿಯಿಂದ ಇರಿದ ಯುವಕನೊಬ್ಬ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿ ನಡೆದಿದೆ.
ಶುಕ್ರವಾರ ಮೂಡಬಿದಿರೆಯ ಪ್ರಾಂತ್ಯ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ರೋಹಿತ್ ((26) ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಮುನ್ನ ತನ್ನ ಪ್ರೇಯಸಿ ಚರಿಷ್ಮಾಳಿಗೆ ಚೂರಿಯಿಂದ ಬಲವಾಗಿ ಇರಿದು, ಸುತ್ತಿಗೆಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಬಳಿಕ ಆಕೆಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಗಂಭೀರ ಗಾಯಗೊಂಡಿದ್ದ ಯುವತಿ ಚರಿಷ್ಮಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದ ಕಾರಣ ಆಕೆ ಸಹ ಅಸುನೀಗಿದ್ದಾಳೆ.
ಘಟನೆ ಹಿನ್ನೆಲೆ
ಮಂಗಳೂರು ಬಜಾಲ್ ಮೂಲದವನಾದ ರೋಹಿತ್ ಹಾಗೂ ಚರಿಷ್ಮಾ ಕಳೆದ ಕೆಲ ತಿಂಗಳ್ಲಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಾಂತ್ಯ ನಿವಾಸಿಯಾದ ಚರಿಷ್ಮಾ ಹಾಗೂ ರೋಹಿತ್ ದೂರದ ಸಂಬಂಧಿಕರು ಎನ್ನಲಾಗಿದ್ದು ರೋಹಿತ್ ಆಕೆಯ ಮನೆಗೆ ಆಗಾಗ ಬರುತ್ತಿದ್ದನೆನ್ನಲಾಗಿದೆ.
ಮಂಗಳೂರಿನ ನೃತ್ಯತಂಡವೊಂದರ ಸದಸ್ಯೆಯಾಗಿದ್ದ ಚರಿಷ್ಮಾ ಹಾಗೂ ರೋಹಿತ್ ನಡುವೆ ಇತ್ತೀಚೆಗೆ ಕೆಲ ಸಣ್ಣ ವಿಚಾರಗಳಲ್ಲಿ ಮನಸ್ತಾಪ ಉಂಟಾಗಿತ್ತು.
ಇಂದು (ಶುಕ್ರವಾರ) ಯುವತಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಆಗಮಿಸಿದ ರೋಹಿತ್ ಆಕೆಗೆ ಚೂರಿಯಿಂದ ಬಲವಾಗಿ ಇರಿದದ್ದಲ್ಲದೆ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ.ಬಳಿಕ ತಾನು ಸಹ ಆಕೆಯ ಮನೆಯಲ್ಲೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಮೂಡದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


