ರಾಜ್ಯ

ಪತ್ನಿ ಹತ್ಯೆ: ಇನ್ಫೋಸಿಸ್‌ ಮಾಜಿ ಎಚ್ ಆರ್ ಮ್ಯಾನೇಜರ್ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

ಪತ್ನಿ ಹತ್ಯೆ ಮಾಡಿದ್ದ ಇನ್ಫೋಸಿಸ್‌ ಮಾಜಿ ಎಚ್ ಆರ್ ಮ್ಯಾನೇಜರ್ ಸತೀಶ್ ಕುಮಾರ್ ಗುಪ್ತ ಅವರಿಗೆ ಸಿಟಿ ಸಿವಿಲ್...

ಪತ್ನಿ ಹತ್ಯೆ: ಇನ್ಫೋಸಿಸ್‌ ಮಾಜಿ ಎಚ್ ಆರ್ ಮ್ಯಾನೇಜರ್ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್
ಹೈಕೋರ್ಟ್
Published On :
ಬೆಂಗಳೂರು: ಪತ್ನಿ ಹತ್ಯೆ ಮಾಡಿದ್ದ ಇನ್ಫೋಸಿಸ್‌ ಮಾಜಿ ಎಚ್ ಆರ್ ಮ್ಯಾನೇಜರ್ ಸತೀಶ್ ಕುಮಾರ್ ಗುಪ್ತ ಅವರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.
ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸತೀಶ್‌ ಕುಮಾರ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ರವಿ ಮಳೀಮಠ ಮತ್ತು ನ್ಯಾ. ಜಾನ್‌ ಮೆಕೈಲ್‌ ಡಿ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಅಧೀನ ನ್ಯಾಯಾಲಯ ತೀರ್ಪನ್ನು ಎತ್ತಿಹಿಡಿದಿದೆ. 
2017ರಲ್ಲಿ ಸೆಷನ್ಸ್ ಕೋರ್ಟ್ ಸತೀಶ್ ಕುಮಾರ್ ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸತೀಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, 
ಸತೀಶ್ ಕುಮಾರ್ ಪತ್ನಿಯನ್ನು ಕೊಲೆ ಮಾಡಿರುವುದು ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ಪ್ರಾಸಿಕ್ಯೂಷನ್‌ ಸಾಕ್ಷ್ಯಾಧಾರಗಳಿಂದ ದೃಢಪಡುತ್ತದೆ. ಸಾಕ್ಷ್ಯಾಧಾರಗಳನ್ನು ಕಾನೂನಿನ ಪರಿಧಿಯಲ್ಲಿ ಪರಿಶೀಲಿಸಿದಾಗ ಸತೀಶ್‌ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಅಧೀನ ನ್ಯಾಯಾಲಯ ತೀರ್ಮಾನಿಸಿ, ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಆದೇಶದಲ್ಲಿ ಹೈಕೋರ್ಟ್‌ ಹಸ್ತಕ್ಷೇಪ ಮಾಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ಹೇಳಿದೆ. 
2007ರಲ್ಲಿ ಬೆಂಗಳೂರು ದಕ್ಷಿಣದ ದೆಹಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾಂಕ ಗುಪ್ತಾ ಮತ್ತು ಲಖನೌ ಮೂಲದ ಸತೀಶ್‌ ಕುಮಾರ್‌ ಗುಪ್ತ ಮದುವೆಯಾಗಿದ್ದರು. ಗುಪ್ತಾ ಇನ್‌ಪೋಸಿಸ್‌ನಲ್ಲಿ ಎಚ್‌ಆರ್‌ ಮ್ಯಾನೇಜರ್‌ ಆಗಿದ್ದರು. ಮದುವೆ ನಂತರ ಶಾಂತಿನಗರದ ಸತೀಶ್‌ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಆದರೆ, ಸತೀಶ್‌ ಅವರ ಪೋಷಕರೊಂದಿಗೆ ಹೊಂದಾಣಿಕೆಯಾಗದ ಹಿನ್ನಲೆಯಲ್ಲಿ ಪ್ರಿಯಾಂಕ ಜೆಪಿನಗರ 8ನೇ ಹಂತದ ವೆಂಕಟೇಶ್ವರ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. 2010ರ ಆ. 8ರಂದು ಮನೆಯಲ್ಲಿ ಪ್ರಿಯಾಂಕ ಕೊಲೆಯಾಗಿದ್ದರು. ಗಂಡ ಹೆಂಡತಿ ನಡುವೆ ಸಾಮರಸ್ಯ ಇರಲಿಲ್ಲ. ಪ್ರಿಯಾಂಕ ಗಂಡನನ್ನು ತುಚ್ಛವಾಗಿ ನೋಡಿ, ಅವಮಾನ ಮಾಡುತ್ತಿದ್ದಳು, ಸತೀಶ್‌ ಪೋಷಕರನ್ನು ಹೀಗಳೆಯುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿಹೋಗಿದ್ದ ಸತೀಶ್‌, ಪ್ಲಾನ್‌ ಮಾಡಿ ಜಾಣತನದಿಂದ ಪ್ರಿಯಾಂಕಾ ಹತ್ಯೆ ಮಾಡಿದ್ದ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಠಾಣಾ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾಗ ಸತೀಶ್‌ ತಾನೇ ಕೊಂದಿರುವುದಾಗಿ ಹೇಳಿಕೆ ನೀಡಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.