ಗಣೇಶ ಮೂರ್ತಿ ಮೇಲೆ ಕಲ್ಲೆಸೆತ: ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ
ಗಣೇಶ ಮೂರ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಗಾವಿ ನಗರದ ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದಲ್ಲಿ ನಡೆದಿದೆ...

Published On :
ಬೆಳಗಾವಿ: ಗಣೇಶ ಮೂರ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಗಾವಿ ನಗರದ ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದಲ್ಲಿ ನಡೆದಿದೆ.
ಶನಿವಾರ ಮುಂಜಾನೆ 3.30ರ ಸಮಯದಲ್ಲಿ ಘಟನೆ ನಡೆದಿದ್ದು, ಬೆಳಗಾವಿಯಲ್ಲಿ ಇದೀಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕಲ್ಲು ತೂರಾಟದಿಂದ ಮೋತಿಲಾಲ ವೃತ್ತದಲ್ಲಿನ ಗಣೇಶ ಮೂರ್ತಿಯ ಕಿವಿ. ಕಾಲು ಭಾಗಗಳಿಗೆ ಸ್ವಲ್ಪ ಹಾನಿಯಾಗಿದೆ. ಅಲ್ಲದೆ, ರಸ್ತೆ ಪಕ್ಕದಲ್ಲಿನ ಎರಡು ಆಟೋ ರಿಕ್ಷಾ, ಒಂದು ಕಾರು ಕೂಡ ಜಖಂಗೊಂಡಿವೆ.
ಶುಕ್ರವಾರ ಮೊಹರಂ ಹಬ್ಬದಲ್ಲಿ ಡೋಲಿಯ ಮೆರವಣಿಯು ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದ ಮಾರ್ಗದಲ್ಲಿ ಸಾಗುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸರು, ಸ್ಥಳೀಯರು ಎರಡೂ ಗುಂಪಿನಲ್ಲಿದ್ದವರನ್ನು ಸಮಾಧಾನಪಡಿಸಿ ಮೆರವಣಿಗೆಗೆ ಅವಕಾಶ ಕಲ್ಪಿಸಿದ್ದರು. ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ದ್ವಿಚಕ್ರ ವಾಹನದ ಮೇಲೆ ಆಗಮಿಸಿದ ದುಷ್ಕರ್ಮಿಗಳು ಗಣೇಶ ಮೂರ್ತಿಗೆ ಕಲ್ಲು ತೂರಿಸಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


