ರಾಜ್ಯ

ಸೋಮವಾರಪೇಟೆ ತಹಸೀಲ್ದಾರ್‌ ಮೇಲೆ ಪ್ರವಾಹ ಸಂತ್ರಸ್ತರಿಂದ ಹಲ್ಲೆ

ಸೋಮವಾರಪೇಟೆ ತಾಲೂಕಿನ ತಹಸೀಲ್ದಾರ್ ಪಿಎಸ್ ಮಹೇಶ್ ಅವರ ಮೇಲೆ ಹಲ್ಲೆ‌ ನಡೆಸಿದ ಘಟನೆ ಮಂಗಳವಾರ ...

ಸೋಮವಾರಪೇಟೆ ತಹಸೀಲ್ದಾರ್‌ ಮೇಲೆ ಪ್ರವಾಹ ಸಂತ್ರಸ್ತರಿಂದ ಹಲ್ಲೆ
ತಹಸೀಲ್ದಾರ್ ಮಹೇಶ್(ಎಡಕ್ಕೆ ಇರುವರು - ಸಂಗ್ರಹ ಚಿತ್ರ)
Published On :
ಮಡಿಕೇರಿ: ಸೋಮವಾರಪೇಟೆ ತಾಲೂಕಿನ ತಹಸೀಲ್ದಾರ್ ಪಿಎಸ್ ಮಹೇಶ್ ಅವರ ಮೇಲೆ ಹಲ್ಲೆ‌ ನಡೆಸಿದ ಘಟನೆ ಮಂಗಳವಾರ ರಾತ್ರಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದಿದೆ. 
ಈ ಸಂಬಂಧ ಮಹೇಶ್ ಅವರು ಎಫ್ಐಆರ್ ದಾಖಲಿಸಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳನ್ನು ಗುರುತಿಸಿದ್ದಾರೆ.
ಕುಶಾಲನಗರದ ವಾಲ್ಮೀಕಿ ಭವನ ಪರಿಹಾರ ಕೇಂದ್ರ, ಕುಶಾಲನಗರ ಸರ್ಕಾರಿ ಹಾಸ್ಟೆಲ್ ಹಾಗೂ ಅಂಬೇಡ್ಕರ್ ಭವನದಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಂತ್ರಸ್ತರು ಆಕ್ರೋಷ ವ್ಯಕ್ತಪಡಿಸುತ್ತಿದ್ದು, ಮೂಲ ಸೌಕರ್ಯಗಳೇ ಇಲ್ಲ ಎಂದು ದೂರಿದ್ದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಸಂತ್ರಸ್ತರನ್ನು ಸಮಾಧಾನಪಡಿಸಿ, ಸಮಸ್ಯೆ ಪರಿಹರಿಸಿದ್ದರು.
ಈ ಮಧ್ಯೆ, ನಿನ್ನೆ ಸಂತ್ರಸ್ತರು ಈ ಕೂಡಲೇ ಬಸ್ ಪಾಸ್ ಮತ್ತು ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪಿಎಸ್ ಮಹೇಶ್ ಹಾಗೂ ಕುಶಾನಗರ ಇನ್ಸ್ ಪೆಕ್ಟರ್ ಕ್ಯಾತೆಗೌಡ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.
ರಾತ್ರಿ ಸಂತ್ರಸ್ತರ ಹಾಜರಾತಿ‌ ಪಡೆದುಕೊಳ್ಳಲು ತೆರಳಿದ್ದ ತಹಸೀಲ್ದಾರ್ ಮಹೇಶ್‌ ಮಲಗಿದ್ದ ಮಹಿಳೆಯರ ಮೈಮುಟ್ಟಿ ಎಬ್ಬಿಸಲು ಯತ್ನಿಸಿದರು ಎಂದು ಆರೋಪಿಸಿ ಸಂತ್ರಸ್ತರ ಗುಂಪು ತಹಸೀಲ್ದಾರ್ ಮೇಲೆ ಹಲ್ಲೆಗೆ ಮುಂದಾಗಿದೆ. ಓಡಿ ತಪ್ಪಿಸಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಗುಂಪಿನ ನಡುವಿನಿಂದ ತೂರಿ ಬಂದ ಕಲ್ಲು ತಹಸೀಲ್ದಾರ್ ಅವರ ಹಣೆಗೆ ಬಡಿದು ಗಾಯವಾಗಿದೆ. 
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ‌ ನೀಡಿದ್ದು, ತಹಸೀಲ್ದಾರ್ ನೀಡಿದ ದೂರಿನ‌ ಆಧಾರದ ಮೇಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಸುರೇಶ್, ಸಂಜೀವ ಸೇರಿದಂತೆ ಇತರರ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.