ಗೌರಿ ಲಂಕೇಶ್ ಹತ್ಯೆ ಹಿಂದೆ ಬಹು ತಂಡಗಳ ಪಿತ್ತೂರಿ :ಎಸ್ ಐಟಿ
ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬಿರುಸುಗೊಳಿಸಿರುವ ವಿಶೇಷ ತನಿಖಾ ತಂಡ ನಿಹಾಲ್ ಆಲಿಯಾಸ್ ದಾದಾ ಮತ್ತು ಮುರಳಿ ಆಲಿಯಾಸ್ ಶಿವಾ ಎಂಬವರನ್ನು ಬಂಧಿಸಲು ಕಾಯುತ್ತಿದೆ.

Published On :
ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬಿರುಸುಗೊಳಿಸಿರುವ ವಿಶೇಷ ತನಿಖಾ ತಂಡ ನಿಹಾಲ್ ಆಲಿಯಾಸ್ ದಾದಾ ಮತ್ತು ಮುರಳಿ ಆಲಿಯಾಸ್ ಶಿವಾ ಎಂಬವರನ್ನು ಬಂಧಿಸಲು ಕಾಯುತ್ತಿದೆ.
ನಾಲ್ವರು ವಿಚಾರವಾದಿಗಳು ಹಾಗೂ ಅನೇಕ ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ವಾಸುದೇವ ಸೂರ್ಯವಂಶಿ ಬೈಕ್ ಕಳ್ಳನಾಗಿದ್ದು, ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಈತನೇ ಬೈಕ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿಗೆ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಆತನ ಸ್ನೇಹಿತ ದಾಬೊಲ್ಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶರದ್ ಕಾಲಸ್ಕರ್ ಎಂಬನಿಂದ ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮಿಸ್ಕಿನ್ ಹಾಗೂ ಪರಶುರಾಮ್ ವಾಘ್ಮೋರೆ ಈ ಬೈಕ್ ಬಳಸಿದ್ದಾಗಿ ಆತನ ಹೇಳಿಕೆ ನೀಡಿದ್ದಾನೆ. ಭಯೋತ್ಪಾದಕ ನಿಗ್ರಹ ಅಧಿಕಾರಿಗಳು ಬೈಕ್ ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಾಸುದೇವ್ ಕಳ್ಳತನ ಮಾಡಿದ್ದ ಬೈಕ್ ನ್ನು ಶರದ್ ಕಾಲಸ್ಕರ್ ನಿಗೆ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BengaluruConspiracyಪಿತ್ತೂರಿಎಸ್ ಐಟಿGauri Lankesh Murderಗೌರಿ ಲಂಕೇಶ್ ಹತ್ಯೆ ಪ್ರಕರಣMultiple teamsSIT ಬೆಂಗಳೂರುಬಹು ತಂಡಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


