ರಾಜ್ಯ

ಸಿದ್ದರಾಮಯ್ಯನವರನ್ನು ಕಂಡು ಮಾತನಾಡಿಸಿದ ಕನ್ನಡಿಗರು, ಸೆಲ್ಫಿಗೆ ಫೋಸ್ ಕೊಟ್ಟ ಮಾಜಿ ಸಿಎಂ

ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ...

ಸಿದ್ದರಾಮಯ್ಯನವರನ್ನು ಕಂಡು ಮಾತನಾಡಿಸಿದ ಕನ್ನಡಿಗರು, ಸೆಲ್ಫಿಗೆ ಫೋಸ್ ಕೊಟ್ಟ ಮಾಜಿ ಸಿಎಂ
ವಿದೇಶಿ ಕನ್ನಡಿಗರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಅಲ್ಲಿನ ಕನ್ನಡಿಗರು ಫೋಟೋ, ಸೆಲ್ಫಿ ತೆಗೆಸಿಕೊಂಡು ಮಾತನಾಡಿಸಿ ಸಂಭ್ರಮಪಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಸಿದ್ದರಾಮಯ್ಯನವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಷ್ಯಾದ ಮಾಸ್ಕೋ ಪ್ರವಾಸದಲ್ಲಿರುವ ಅವರನ್ನು ಕಾಣಲು ಅಲ್ಲಿನ ಕನ್ನಡಿಗರು ಬಂದು ಮಾತನಾಡಿಸಿದರು. ಸೆಲ್ಫಿಗಾಗಿ ಮುಗಿಬಿದ್ದರು.  ಅಲ್ಲಿನ ಪ್ರವಾಸಿ ತಾಣಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆ ಭಾರತೀಯರು ಕಾಣಸಿಕ್ಕಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರು ಕೂಡ ಸಿದ್ದರಾಮಯ್ಯನವರಿಗೆ ಪ್ರೀತಿ, ಅಭಿಮಾನ ತೋರುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ತಮ್ಮನ್ನು ಕಾಣಲು ಬಂದ ಅಭಿಮಾನಿಗಳೊಂದಿಗೆ ಹಸನ್ಮುಖಿಯಾಗಿ ಫೋಟೋಗೆ ಫೋಸ್ ನೀಡಿದ ಅವರು ಅಲ್ಲಿನ ಕನ್ನಡಿಗರೊಂದಿಗೆ ಮಾತುಕತೆ ನಡೆಸಿ ಅನುಭವ ಹಂಚಿಕೊಂಡರು.

ಸದಾ ಬಿಳಿ ಪಂಚೆ, ಶರ್ಟ್​ ಧರಿಸಿ ರಾಜ್ಯಾದ್ಯಂತ ಓಡಾಡುವ ಸಿದ್ದರಾಮಯ್ಯನವರು ವಿದೇಶ ಪ್ರವಾಸದಲ್ಲಿರುವಾಗ ಸೂಟು ಬೂಟು ಧರಿಸುತ್ತಾರೆ. ಕಳೆದ 3ರಿಂದ 10 ದಿನಗಳ ಕಾಲ ತಮ್ಮ ಮಗ ಯತೀಂದ್ರ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಕೆಲವು ರಾಜಕೀಯ ಸ್ನೇಹಿತರೊಂದಿಗೆ ಸಿದ್ದರಾಮಯ್ಯನವರು ವಿದೇಶ ಪ್ರವಾಸದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.