ಧರ್ಮಸ್ಥಳ: 'ಪ್ರಗತಿ ರಕ್ಷಾ ಕವಚ' ವಿಮಾ ಯೋಜನೆ ಉದ್ಘಾಟಿಸಿದ ಸಚಿವೆ ನಿರ್ಮಲಾ ಸೀತಾರಾಮನ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪಿನ ಸದಸ್ಯರಿಗೆ ಇರುವ ವಿಮಾ ...

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪಿನ ಸದಸ್ಯರಿಗೆ ಇರುವ ವಿಮಾ ಯೋಜನೆ ಪ್ರಗತಿ ರಕ್ಷಾ ಕವಚವನ್ನು ಕೇಂದ್ರ ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು.
ಯೋಜನೆಯನ್ನು ಶ್ಲಾಘಿಸಿದ ಸಚಿವೆ, ಜನರು ಆರ್ಥಿಕ ಸಂಕಷ್ಟದಿಂದ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ತಡೆಯುತ್ತದೆ. ಪ್ರಗತಿ ರಕ್ಷಾ ಕವಚ ಸ್ವಸಹಾಯ ಗುಂಪುಗಳ ಸದಸ್ಯರು ಸಾಲ ತೆಗೆದುಕೊಂಡವರಿಗೆ ಸಹ ವಿಮಾ ಸೌಲಭ್ಯವನ್ನು ನೀಡುತ್ತದೆ ಎಂದರು.
ಸಾಲ ತೆಗೆದುಕೊಂಡ ಸದಸ್ಯರಿಗೆ 5 ಲಕ್ಷದವರೆಗೆ ವಿಮೆ ನೀಡಲಾಗುತ್ತದೆ. ಅದು 60 ವರ್ಷದವರೆಗೆ ಇರುತ್ತದೆ. ಸಾಲ ತೆಗೆದುಕೊಂಡವರು ಅಥವಾ ಅವರ ಪತ್ನಿ 60 ವರ್ಷದೊಳಗೆ ಮೃತಪಟ್ಟರೆ ಸಾಲದ ಮೊತ್ತವನ್ನು ವಿಮೆ ಭರಿಸುತ್ತದಂ ಮತ್ತು ಉಳಿದ ಹಣವನ್ನು ನಾಮಿನಿಗೆ ನೀಡಲಾಗುತ್ತದೆ. ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಮತ್ತು ಎಲ್ಐಸಿಯ ಜಂಟಿ ಕಾರ್ಯಕ್ರಮವಾಗಿದೆ.
ಅಗತ್ಯವಿರುವವರಿಗೆ ಸಾಲ ನೀಡಿದರೆ ಸಾಲದು, ಸದಸ್ಯರಿಗೆ ಸಾಲದ ಸೌಲಭ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


