ಚಿಂತಕ, ಪ್ರೋಫೆಸರ್ ಹೆಚ್. ಎಂ. ಮರುಳ ಸಿದ್ದಯ್ಯ ನಿಧನ
ಮೊದಲ ಬಾರಿಗೆ ಸಮಾಜ ಕಾರ್ಯ ಶಿಕ್ಷಣ ಪರಿಚಯಿಸಿದ್ದ ಚಿಂತಕ ಪ್ರೋಫೆಸರ್ ಹೆಚ್. ಎಂ. ಮರುಳ ಸಿದ್ದಯ್ಯ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಬೆಂಗಳೂರು: ಮೊದಲ ಬಾರಿಗೆ ಸಮಾಜ ಕಾರ್ಯ ಶಿಕ್ಷಣ ಪರಿಚಯಿಸಿದ್ದ ಚಿಂತಕ ಪ್ರೋಫೆಸರ್ ಹೆಚ್. ಎಂ. ಮರುಳ ಸಿದ್ದಯ್ಯ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆಯಿಂದ ಬೆಂಗಳೂರಿನಲ್ಲಿ ಮೃತಪಟ್ಟ ಮರಳು ಸಿದ್ದಯ್ಯ ಅವರಿಗೆ ಚಾಮರಾಜಪೇಟೆಯ ವೀರಶೈವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಬೆಂಗಳೂರಿನಲ್ಲಿ ನಿಧನರಾಗಿದ್ದು, ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.
ಕೊಡ್ಲಿಗಿ ತಾಲೂಕಿನ ಹಿರೇಕುಂಬಳ ಕುಂಟೆಯಲ್ಲಿ 1931ರಲ್ಲಿ ಜನಿಸಿದ ಹೆಚ್. ಎಂ. ಮರುಳ ಸಿದ್ದಯ್ಯ , ಮೈಸೂರು ವಿ.ವಿ. ದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಹಾಗೂ ಸಮಾಜ ಕಾರ್ಯದಲ್ಲಿ ದೆಹಲಿಯ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳು. ವಾರಣಾಸಿಯ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದರು.
ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ ಮುಂತಾದ ಹಲವಾರು ಯೋಜನೆಗಳ ರೂವಾರಿಯಾಗಿ ಸಮಾಜಕಾರ್ಯ ಶಿಕ್ಷಣ, ಕ್ಷೇತ್ರ ಕಾರ್ಯ, ಸಂಘಟನೆ, ಸಾಹಿತ್ಯರಚನೆಯಲ್ಲಿ ಮರುಳ ಸಿದ್ದಯ್ಯ ತೊಡಗಿಸಿಕೊಂಡಿದ್ದರು.ಇಂದಿನ ಸ್ವಚ್ಛ ಭಾರತ ಕಲ್ಪನೆಯನ್ನು 1990 ರ ದಶಕದಲ್ಲಿ ನಿರ್ಮಲ ಕರ್ನಾಟಕ ಎಂಬ ಹೆಸರಿನಲ್ಲಿ ಚಾಲ್ತಿಗೆ ತಂದು ಗುಂಪು ಶೌಚಾಲಯಗಳನ್ನು ನಿರ್ಮಿಸಲು ಕಾರಣಕತೃರಾಗಿದ್ದರು.
ಇವರು ಬರೆದ ಕೃತಿಗಳಲ್ಲಿ ವಿಷಬಿಂದು (ಕಥನಕಾವ್ಯ), ಸಾವಿನ ಸೆಳವಿನಲ್ಲಿ (ಜೀವನ ಕಥೆಗಳು) ಮುಂತಾದ ಸಾಹಿತ್ಯ ಕೃತಿಗಳಷ್ಟೇ ಅಲ್ಲದೆ ಸಮಾಜಕಾರ್ಯ, ಮಾನವ ಸಮಾಜ ಹಾಗೂ ಸಮಾಜಶಾಸ್ತ್ರ, ಸಮುದಾಯ ಸಂಘಟನೆ, ಸಮಾಜಶಾಸ್ತ್ರದ ಕೆಲವು ಪಾಠಗಳು,ಮಾನವ ಸಂಪನ್ಮೂಲ ಸಂವರ್ಧನೆ, ಗ್ರಾಮೋನ್ನತಿ, ನಾವು ಮತ್ತು ಸಹಕಾರ, ಪಂಚಮುಖಿ ಅಭ್ಯುದಯ ಮಾರ್ಗ, ಮುಂತಾದ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ 60 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


