ರಾಜ್ಯ

ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಯಲಿ: ವೀರೇಂದ್ರ ಹೆಗ್ಗಡೆ

ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಯಬೇಕು. ಹೀಗಾಗಿ ಸಂಪ್ರದಾಯವನ್ನು ಮೀರದಿರುವುದು ಒಳಿತು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಯಲಿ: ವೀರೇಂದ್ರ ಹೆಗ್ಗಡೆ
ಡಾ. ವೀರೇಂದ್ರ ಹೆಗ್ಗಡೆ
Published On :
ಧರ್ಮಸ್ಥಳ: ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಯಬೇಕು. ಹೀಗಾಗಿ ಸಂಪ್ರದಾಯವನ್ನು ಮೀರದಿರುವುದು ಒಳಿತು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ "ಶಬರಿಮಲೆಗೆ ತೆರಳುವವರು 48 ದಿನ ಬ್ರಹ್ಮಚರ್ಯ ವ್ರತ ಪಾಲನೆ ಮಾಡಿರುತ್ತಾರೆ. ಭಕ್ತರು ವ್ರತ ಆಚರಣೆ ಮಾಡುವುದರ ಹಿಂದೆ ಅವರಲ್ಲಿ ಸಂಯಮವನ್ನು ಬೆಳೆಸಿಕೊಳ್ಳುವ ಉದ್ದೇಶವಿರುತ್ತದೆ. ಸಂಯಮ, ಮನೋನಿಗ್ರಹಗಳು ಮನುಷ್ಯನಿಗೆ ಅಗತ್ಯವಾಗಿದ್ದು ಒಂದು ವೇಳೆ ಸಂಯಮ ಸಡಿಲಾದರೆ ಅಸಮಾನತೆ ಉಂಟಾಗಬಹುದು. ಇದುವೇ ಮೀಟೂ ನಂತಹಾ ಪ್ರಕರಣ ನಡೆಯಲು ಕಾರಣವಾಗಬಾರದು" ಎಂದಿದ್ದಾರೆ.
"ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳಬೇಕು.ದೇವಸ್ಥಾನದ ಪಾವಿತ್ರ್ಯತೆ, ಸಾಂಪ್ರದಾಯಿಕ ಸೌಂದರ್ಯ ಹಾಳಾಗದಂತೆ ಕಾಪಾಡಿಕೊಳ್ಳುವುದು ಒಳಿತು.
"ಕೆಲ ಸಂಪ್ರದಾಯಗಳು ಬದಲಾಗದೆ ಇದ್ದರೆ ಉತ್ತಮ.ಮಹಿಳೆಯರು ಶಬರಿಮಲೆಗೇ ತೆರಳಿ ಪೂಜಿಸಬೇಕಾಗಿಲ್ಲ. ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಸದಲ್ಲಿ ಸಹ ಕೆಲವೆಡೆ ಈ ಬಗೆಯ ನಿರ್ಬಂಧಗಳಿದೆ.ಹೀಗೆಂದ ಮಾತ್ರಕ್ಕೆ ದೇವಸ್ಥಾನಕ್ಕೆ ಪ್ರವೇಶಿಸಿದರೆ ಏನೋ ಆಗುತ್ತದೆ ಎಂದಲ್ಲ,  ಆದರೆ ಪಾರಂಪರಿಕ ಪದ್ದತಿ ಅನುಸರಿಸುವುದು ಸೂಕ್ತ ಎನ್ನುವುದಷ್ಟೇ ನನ್ನ ಭಾವನೆ" ಹೆಗ್ಗಡೆ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.