ರಾಜ್ಯ

ಇಂದು ಕಾವೇರಿ ತೀರ್ಥೋದ್ಭವ: ತಲಕಾವೇರಿ ಜಾತ್ರೆಗೆ ಸಕಲ ಸಿದ್ದತೆ

ದಕ್ಷಿಣ ಬಾರತದ ಪವಿತ್ರ ನದಿಗಳಲ್ಲೊಂದಾದ ಕಾವೇರಿ ತೀರ್ಥೋದ್ಭವದ ಅಮೃತ ಘಳಿಗೆ ತುಲಾ ಸಂಕ್ರಮಣ ಇಂದು (ಬುಧವಾರ). ಇಂದು ಸಂಜೆ 6.45ಕ್ಕೆ ಕೂಡಿ ಬರುವ ಶುಭ ಗಳಿಗೆಯ....

ಇಂದು ಕಾವೇರಿ ತೀರ್ಥೋದ್ಭವ: ತಲಕಾವೇರಿ ಜಾತ್ರೆಗೆ ಸಕಲ ಸಿದ್ದತೆ
ಸಂಗ್ರಹ ಚಿತ್ರ
Published On :
ಮಡಿಕೇರಿ: ದಕ್ಷಿಣ ಭಾರತದ ಪವಿತ್ರ ನದಿಗಳಲ್ಲೊಂದಾದ ಕಾವೇರಿ ತೀರ್ಥೋದ್ಭವದ ಅಮೃತ ಘಳಿಗೆ ತುಲಾ ಸಂಕ್ರಮಣ ಇಂದು (ಬುಧವಾರ). ಇಂದು ಸಂಜೆ 6.45ಕ್ಕೆ ಕೂಡಿ ಬರುವ ಶುಭ ಗಳಿಗೆಯಲ್ಲಿ ತಲಕಾವೇರಿ ತೀರ್ಥಕುಂಡದಿಂದ ತೀರ್ಥೋದ್ಭವವಾಗಲಿದೆ. ಇದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ನಾಡಿನಾದ್ಯಂತದಿಂದ ಸಾವಿಆರು ಭಕ್ತರು ತಲಕಾವೇರಿಗೆ ಆಗಮಿಸಲಿದ್ದಾರೆ.
ಭಕ್ತರನ್ನು ಸ್ವಾಗತಿಸುವ  ಹಾಗೂ ಅವರ ಸುರಕ್ಷತೆ ದೃಷ್ಟಿಯಿಂದ ತಲಕಾವೇರಿ ಹಾಗೂ ಭಾಗಮಂಡಲ ಪ್ರದೇಶದಲ್ಲಿ ಸಕಲ ಸಿದ್ದತೆಗಳು ನಡೆದಿದೆ. ಪ್ರವಾಸಿಗರಿಗಾಗಿ ಬಸ್ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ ಹಾಗೂ ವಾಹನ ನಿಲ್;ಉಗಡೆ ವ್ಯವಸ್ಥೆ ಮಡಲಾಗಿದೆ. ಭದ್ರೆಅತೆಯ ಹಿತದೃಷ್ಟಿಯಿಂದ ಸುಮಾರು 600 ಪೋಲೀಸರು ನಿಯೋಜಿಸಲ್ಪಟ್ಟಿದ್ಡಾರೆ. 
ಕಾವೇರಿಯು ತೀರ್ಥರೂಪಿಣಿಯಾಗಿ ತುಲಾ ಸಂಕ್ರಮಣದಂದು ಕಾಣಿಸಿಕೊಳ್ಳುತ್ಟಾಳೆ. ಅಂದು ಕಾವೇರಿಗೆ ಪೂಜೆ ಸಲ್ಲಿಸಿ ತೀರ್ಥ ಪಡೆದು ಬಳಿಕ ಪ್ರಸಾದ ವಿತರಣೆ ನಡೆಯುತ್ತದೆ ಎಂದು ತಲಕಾವೇರಿ ದೇವಸ್ಥಾನದ ಅರ್ಚಕ ನಾರಾಯಣಾಚಾರ್ ಹೇಳಿದ್ದಾರೆ.
ಜಾತ್ರೆ ಸಿದ್ದತೆ ಪರಿಶೀಲನೆಗೆಂದು ಇಂದು ಜಿಲ್ಲಾಧಿಕಾರಿಗಳಾದ ಪಿ.ಐ. ಶ್ರೀವಿದ್ಯಾ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸೋಮವಾರ ಸ್ಥಳಕ್ಕೆ ಆಗಮಿಸಿದ್ದರು.
ಮುಖ್ಯಮಂತ್ರಿ ಭೇಟಿ
ಬುಧವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಡಿಕೇರಿಗೆ ಭೇಟಿ ನೀಡಲಿದ್ದು ಪ್ರವಾಹ ಸಂತ್ರಸ್ಥರೊಡನೆ ಸಂವಾದ ನಡೆಸಲಿದ್ದಾರೆ. ಬಳಿಕ ಅಧಿಕಾರಿಗಳ ಸಭೆ ನಡೆಸುವ ಮುಖ್ಯಮಂತ್ರಿಗಳು ಸಂಜೆ ವೇಳೆಗೆ ತಲಕಾವೇರಿಗೆ ಭೇಟಿ ಕೊಡಲಿದ್ದು ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.