ಬೆಂಗಳೂರು: ಕ್ಯಾಸಿನೋ ಶೋಕಿಗಾಗಿ ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ
ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್ಜಂಗ್ಲಿ ಎಂಬಾತ ಬಂಧಿತ ..

Published On :
ಬೆಂಗಳೂರು: ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್ಜಂಗ್ಲಿ ಎಂಬಾತ ಬಂಧಿತ ಆರೋಪಿ.
ವೀಕ್ ಎಂಡ್ನಲ್ಲಿ ಒಂಟಿಯಾಗಿ ಇರುವ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿ ಬಳಿಕ ವಿಮಾನದಲ್ಲಿ ಗೋವಾಗೆ ಹೋಗುತ್ತಿದ್ದ. ಅಲ್ಲಿ ಗೋವಾದಲ್ಲಿ ಕ್ಯಾಸಿನೋ ಆಡುವುದಕ್ಕಾಗಿ ಮನೆಕಳ್ಳತನ ಮಾಡುತ್ತಿದ್ದ. ಅದು ಕೂಡ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ರಾಡ್ನಿಂದ ಬೀಗ ಮುರಿದು ಎಂಟ್ರಿ ಕೊಡುತ್ತಿದ್ದ. ನಂತರ ಫಿಂಗರ್ ಪ್ರಿಂಟ್ ಸಿಗಬಾರದು ಅಂತ ಮುಟ್ಟಿದ ಜಾಗವನ್ನು ಬಟ್ಟೆಯಿಂದ ಕ್ಲೀನ್ ಮಾಡುತ್ತಿದ್ದ.
ಇದೀಗ ಗಿರಿನಗರ ಪೊಲೀಸರು ಬಂಧಿಸಿ ಪ್ರಕಾಶ್ನಿಂದ ಒಂದು ಡಿಯೋ ಬೈಕ್ ಸೇರಿದಂತೆ 600 ಗ್ರಾಂ ಚಿನ್ನಾಭರಣ ಸೇರಿದಂತೆ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಕ್ಯಾಸಿನೋ ಆಡುವುದರೊಂದಿಗೆ ಐಷಾರಾಮಿ ಜೀವನ ನಡೆಸಲು ಈತ ಕಳ್ಳತನ ಮಾಡುತ್ತಿದ್ದ, ಈತನ ವಿರುದ್ಧ ಕೊಡಿಗೆಹಳ್ಳಿಯಲ್ಲಿ 10 ಕೇಸ್, ವಿಜಯನಗರ ಠಾಣೆಯಲ್ಲಿ ಮತ್ತು ಚೆನ್ನಮ್ಮನಕೆರೆಯಲ್ಲಿ ಕೇಸ್ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
casinoಗಿರಿನಗರ ಪೊಲೀಸ್ ಠಾಣೆಕ್ಯಾಸಿನೋJunglee alias Prasad ArrestGirinagara Police stationಜಂಗ್ಲಿ ಅಲಿಯಾಸ್ ಪ್ರಸಾದ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


