ಬೆಂಗಳೂರು: ಕುರುಬರಹಳ್ಳಿಯಲ್ಲಿ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ : ಮೃತ್ಯುಕೂಪ ರಾಜಕಾಲುವೆ !
ಕುರುಬರಹಳ್ಳಿಯಲ್ಲಿ ಮೃತ್ಯೂಕೂಪದಂತಿರುವ ಈ ರಾಜಕಾಲುವೆಯಲ್ಲಿ ಒಂದು ವರ್ಷದ ನಂತರವೂ ಮತ್ತೆ ದುರಂತ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ

ಬೆಂಗಳೂರು : ಪಶ್ಚಿಮ ಬೆಂಗಳೂರು ಭಾಗದಲ್ಲಿರುವ ಕುರುಬರಹಳ್ಳಿಯಲ್ಲಿ ಕಳೆದ ವರ್ಷ ಅಕ್ಟೋಬರ್ 13 ರಂದು ಭಾರೀ ಮಳೆಯಿಂದಾಗಿ 5 ಮಂದಿ ಮೃತಪಟ್ಟಿದ್ದರು. ರಾಜಕಾಲುವೆ ಬಳಿ ವಾಸಿಸುತ್ತಿದ್ದ ಕಮಲಮ್ಮ ಮತ್ತು ಶಂಕರಪ್ಪ ದಂಪತಿ ಸೇರಿದಂತೆ ಅವರ ತಾಯಿ ಮಗಳು, ಮೀನಾಕ್ಷಿ, ಪುಷ್ಪ ರಾಜಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಮೃತ್ಯೂಕೂಪದಂತಿರುವ ಈ ರಾಜಕಾಲುವೆಯಲ್ಲಿ ಒಂದು ವರ್ಷದ ನಂತರವೂ ಮತ್ತೆ ದುರಂತ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಬೇರೆ ಬೇರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಿಗೆ ಬರುವ ಈ ಕಾಲುವೆಯ ಒಂದು ಭಾಗವನ್ನು ಮಾತ್ರ ಸರಿಪಡಿಸಲಾಗಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕಾಲುವೆ ಸರಿಪಡಿಸದೆ ಇರುವುದರಿಂದ ಜನರು ತೀವ್ರ ರೀತಿಯ ತೊಂದರೆ ಎದುರಿಸುವಂತಾಗಿದೆ.
ಕಾಲುವೆ ಬಳಿಯಿರುವ ಮನೆಗಳಿಗೆ ನೀರು ಪ್ರವೇಶಿಸದಂತೆ ತಡೆಗಟ್ಟಲು ಒಂದು ಗೋಡೆ ಸ್ಥಾಪಿಸಲಾಗಿದ್ದು, ಗೋಡೆಯ ಮೇಲೆ ಬೇಲಿ ಹಾಕಲಾಗಿದೆ. ಆದರೆ ಬಲಭಾಗದ ಕಾಲುವೆ ನಿರ್ಲಕ್ಷ್ಯಕ್ಕೊಳಪಟ್ಟಿರುವುದರಿಂದ ಮಳೆ ನೀರು ಮನೆಗೆ ನುಗ್ಗುವಂತಾಗಿದೆ ಎಂದು ಟೈಲರ್ ಷಣ್ಮುಗ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಆದರೆ, ನೀರು ಬಾರದಂತೆ ಹಾಕಿರುವ ತಡೆಗೋಡೆ ಸಹ ಎತ್ತರದಲ್ಲಿ ಇಲ್ಲ ಎಂದು ಕುರುಬರಹಳ್ಳಿ ನಿವಾಸಿ ರಾಧಾ ಆರೋಪಿಸಿದರು. ಬೆಂಗಳೂರಿನಲ್ಲಿ ಪ್ರತಿದಿನ ಮಳೆಯಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ದುರಂತ ಸಂಭವಿಸುವ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಕೆಂಪೇಗೌಡ ಲೇಔಟ್ ನಿವಾಸಿ ಅಳಲು ತೋಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


