ಎಸಿಬಿ ದಾಳಿ ಬಳಿಕ ಕೆಎಐಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿಗೆ ಹೃದಯಾಘಾತ
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಕೆಎಐಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿಯವರಿಗೆ ಹೃದಯಾಘಾತವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸೋಮವಾರ ತಿಳಿದುಬಂದಿದೆ...

Published On :
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಕೆಎಐಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿಯವರಿಗೆ ಹೃದಯಾಘಾತವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಎಸಿಬಿ ದಾಳಿ ಬಳಿಕ ಶನಿವಾರ ರಾತ್ರಿ ಎದೆ ನೋವು ಎಂದು ಹೇಳುತ್ತಿದ್ದ ಸ್ವಾಮಿಯವರನ್ನು ಕುಟುಂಬಸ್ಥರು ನಗರ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸ್ವಾಮಿಯವರಿಗೆ ಆಸ್ಪತ್ರೆಯ ಸಿಸಿಯು (ಕ್ರಿಕಿಟಲ್ ಕೇರ್ ಯುನಿಟ್)ವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿರುವುದನ್ನು ಆಸ್ಪತ್ರೆಯವರು ದೃಢಪಡಿಸಿದ್ದಾರೆ.
ಸ್ವಾಮಿಯವರ ಮನೆ ಬಳಿ ಶುಕ್ರವಾರ ತೆರಳುತ್ತಿದ್ದಂತೆಯೇ ಅವರು ಹಣ ಹಾಗೂ ದಾಖಲೆಗಳು ತುಂಬಿದ ಬ್ಯಾಗ್ ಗಳನ್ನು 14ನೇ ಮಹಡಿಯಲ್ಲಿರುವ ಮನೆಯ ಕಿಟಕಿಯಿಂದ ಕೆಳಗೆ ಎಸೆದಿದ್ದರು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
ದಾಳಿ ವೇಳೆ ಅಧಿಕಾರಿಗಳು ರೂ.4.52 ಕೋಟಿ ನಗದು ಹಾಗೂ 1.6 ಕೆಜಿ ಚಿನ್ನ. 3 ಕಾರು, 8 ಮನೆ, 10 ಸೈಟ್ ಹಾಗೂ 10 ಎಕರೆ ಕೃಷಿ ಭೂಮಿಯ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


