ರಾಜ್ಯ

ಹೆಸರಿಗಷ್ಟೆ ಗಾಂಧಿಪುರ: ತತ್ವ ಸಿದ್ಧಾಂತದ ಅನುಸರಣೆ ಇಲ್ಲವೇ ಇಲ್ಲ!

ಪ್ರತಿದಿನ ಸೂರ್ಯೋದಯದ ನಂತರ ನೈಸರ್ಗಿಕ ಕರೆಗೆ ಓಗೋಡುತ್ತಾರೆ, ಮಹಿಳೆ ಮತ್ತು ಯುವತಿಯರು ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ...

ಹೆಸರಿಗಷ್ಟೆ ಗಾಂಧಿಪುರ:  ತತ್ವ ಸಿದ್ಧಾಂತದ ಅನುಸರಣೆ ಇಲ್ಲವೇ  ಇಲ್ಲ!
ನಂದಿಬೆಟ್ಟದ ಮೇಲಿರುವ ಗಾಂಧಿ ನಿಲಯ
Published On :
ಮೊಡಕುಹೊಸಹಳ್ಳಿ(ಚಿಕ್ಕಬಳ್ಳಾಪುರ): ಪ್ರತಿದಿನ ಸೂರ್ಯೋದಯದ ನಂತರ ನೈಸರ್ಗಿಕ ಕರೆಗೆ ಓಗೋಡುತ್ತಾರೆ, ಮಹಿಳೆ ಮತ್ತು ಯುವತಿಯರು ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೋಗುತ್ತಾರೆ, ಒಂದು ವೇಳೆ ನಾವು ಹುಷಾರು ತಪ್ಪಿದರೇ  ನಾವು ಪಕ್ಕದ ಮನೆಯವರ ಶೌಚಾಲಯಕ್ಕೆ ಹೋಗುವುದಿಲ್ಲ, ಏಕೆಂದರೇ ಅವರು ನಮಗಿಂತ ಕೆಳಜಾತಿಯವರು ಎಂದಾದರೇ ಅವರ ಮನೆಗೆ ಕಾಲಿಡುವುದಿಲ್ಲ.
ರಾಜಕೀಯ ಸ್ವತಂತ್ರ್ಯಕ್ಕಿಂತ ನೈರ್ಮಲ್ಯ ಅತಿ ಮುಖ್ಯ ಎಂದು  ಮಹಾತ್ಮ ಗಾಂಧಿ ಹೇಳಿದ್ದರು,  ಆದರೆ ದೇಶ 150ನೇ ಗಾಂಧಿ ಹುಟ್ಟುಹಬ್ಬ ಆಚರಿಸುತ್ತಿದೆ,  ಆದರೆ ಚಿಕ್ಕಬಳ್ಳಾಪುರದ  ಮೊಡಕುಹೊಸಹಳ್ಳಿ  ಗ್ರಾಮದ ಹಲವು ಮನೆಗಳಲ್ಲಿ ಶೌಚಾಲಯಗಳೇ ಇಲ್ಲ, ದುರಾದೃಷ್ಟ ಎಂದರೇ ಅಸ್ಪೃಶ್ಯತೆ ಎಂಬುದು ಇನ್ನೂ ಜೀವಂತವಾಗಿದೆ.
ಮೊಡಕು ಹೊಸಹಳ್ಳಿಯನ್ನು ಗಾಂಧಿಪುರ ಎಂದು ಪ್ರಸಿದ್ಧವಾಗಿದೆ, ಇದು ನಂದಿ ಬೆಟ್ಟದ ಒಂದು ಸಣ್ಣ ಗ್ರಾಮವಾಗಿದೆ,  ಮಹಾತ್ಮ ಗಾಂಧೀಜಿ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾಗ ವೈದ್ಯರ ಸಲಹೆಯಂತೆ ಗಾಂಧೀಜಿ ನಂದಿ ಬೆಟ್ಟ ಆರಿಸಿಕೊಂಡರು, 1936 ರಲ್ಲಿ ಗಾಂಧೀಜಿ ಸುಮಾರು 50 ದಿನಗಳಷ್ಟು ಕಾಲ ನಂದಿ ಬೆಟ್ಟದಲ್ಲಿದ್ದರು. ಜೊತೆಗೆ ಇದೇ ವೇಳೆ ಮೊಡಕು ಹೊಸಹಳ್ಳಿಗೆ ಭೇಟಿ ನೀಡಿದ್ದರು.
ಹರಿಜನ ಕ್ಯಾಂಪೇನ್ ಅಂಗವಾಗಿ ಹರಿಜನ ಕಾಲೋನಿಯಲ್ಲಿ ಕಳೆದು ಜನರ ಜೊತೆ ಮಾತುಕತೆ ನಡೆಸಿದ್ದರು. ಇಡೀ ಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು, ಅವುಗಳಲ್ಲಿ ಎಷ್ಟೋ ಮನೆಗಳಲ್ಲಿ ಶೌಚಾಲಯಗಳೇ ಇಲ್ಲ, ಒಂದೇ ಒಂದು ಸರ್ಕಾರಿ ಶಾಲೆಯಿದೆ, ಕೇವಲ 4ನೇ ತರಗತಿ ವರೆಗೆ ಮಾತ್ರ ಶಾಲೆಯಿದೆ, ಸ್ವಚ್ಛ ಭಾರತ ಮಿಷನ್ ಅಡಿ ಪ್ರತಿ ಶೌಚಾಲಯಕ್ಕೆ 15 ಸಾವಿರ ರು ಹಣ ನಿಗದಿ ಪಡಿಸಲಾಗಿದೆ.
ಸರಿಯಾದ ಒಳಚರಂಡಿ ವ್ಯವಸ್ಥೆಯಿಲ್ಲ, ಇಲ್ಲಿರುವ ದೊಡ್ಡ ಸಿಮೆಂಟ್  ರಿಂಗ್ ಗಳನ್ನು ಕಸದ ತೊಟ್ಟಿ ಮತ್ತು ಬಟ್ಟೆ ಒಣಗಿ ಹಾಕಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ, ಇನ್ನು ಕೆಲವು ಮನೆಗಳಲ್ಲಿ ಮಕ್ಕಳು ಆಟವಾಡಲು ಬಳಸಿಕೊಳ್ಳುತ್ತಿದ್ದಾರೆ.
ಪೂಜಪ್ಪ ಎಂಬುವರ ಪತ್ನಿ ಹಾಗೂ ಸೊಸೆ ಪ್ರತಿದಿನ ಶೌಚಕ್ಕಾಗಿ 1 ಕಿಮೀ ದೂರ ನಡೆದುಕೊಂಡು ಹೋಗುತ್ತಾರೆ, ಇಕುವ ಸಿಮೆಂಟ್ ರಿಂಗ್ ಬಳಸಿಕೊಂಡು ಬ್ಯಾಂಕ್ ನಲ್ಲಿ ಸಿಗುವ ಲೋನ್ ತೆಗೆದುಕೊಂಡು ಶೌಚಾಲಯ ಕಟ್ಟಿಸಿಕೊಳ್ಳಲು ಹೇಳಿದರೂ ಕೇಳುತ್ತಿಲ್ಲ, ನಮ್ಮ ಬಳಿ ಹಣವಿಲ್ಲ, ಮೊದಲಿಗೆ ಹಣ ಹೂಡಲು ನಮ್ಮ ಬಳಿ ಅಷ್ಟೊಂದು ಹಣದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ಇಲ್ಲಿಗೆ ಭೇಟಿ ನೀಡಿರುವ ವಿಚಾರ ಇಲ್ಲಿನ ಜನಗಳ ಬಾಯಲ್ಲಿ ಮಾತನಾಡುತ್ತಾರೆ,  ನನ್ನ ಅತ್ತೆ ಗಾಂಧೀಜಿ ಬಗ್ಗೆ ಹೇಳುತ್ತಿರುತ್ತಾರೆ,  ಗಾಂಧೀಜಿ ಮುದ್ದೆ ಸಾರು ಬಳಸುತ್ತಿದ್ದರು, ಹೀಗಾಗಿ ನಮ್ಮ ಮನೆಯಲ್ಲಿ ಕೇವಲ ಸಸ್ಯಹಾರ ಊಟ ಮಾತ್ರ ಎಂದು ಸುಮಿತ್ರ ಎಂಬುವರು ಹೇಳಿದ್ದಾರೆ.
1927 ರ ಬೇಸಿಗೆ ಕಾಲದಲ್ಲಿ ಮೈಸೂರಿನಲ್ಲಿ ಖಾದಿ ಪ್ರಚಾರದ ವೇಳೆ ನಂದಿ ಬೆಟ್ಟದಲ್ಲಿ ಉಳಿದುಕೊಳ್ಳಲು ನಿಶ್ಚಯಿಸಿದ್ದರು, ಏಪ್ರಿಲ್ 20 ರಂದು ಯಶವಂತಪುರ ರೈಲ್ವೆ ನಿಲ್ದಾಣ ತಲುಪಿದ್ದರು, ನಂತರ ಜೂನ್ 5ರಂದು ನಂದಿ ಹಿಲ್ಸ್ ನಿಂದ ತೆರಳಿದ್ದರು.
1936 ರಲ್ಲಿ ಗಾಂಧಿ  ಚೆನ್ನೈ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಈ ವೇಳೆ ಅಧಿಕ ರಕ್ತದೊತ್ತಡ ಏರಿತ್ತು,  ಈ ವೇಳೆ ನಂದಿ ಬೆಟ್ಟಕ್ಕೆ ತೆರಳಿ ಸುಮಾರು 50 ದಿನಗಳ ಕಾಲ ತಂಗಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.