ಚಿತ್ರದುರ್ಗ: ಪೂರ್ಣಗೊಂಡ ಸುರಂಗಮಾರ್ಗ; ತಿರುಪತಿ ತಿಮ್ಮಪ್ಪನಿಗೆ 'ಹರಕೆ' ತೀರಿಸಿದ ಜನನಾಯಕರು!
ತಮ್ಮ ವಯಕ್ತಿಕ ಆಸೆ, ಆಕಾಂಕ್ಷೆ ಈಡೇರಿಸುವಂತೆ ದೇವರಲ್ಲಿ ಹರಕೆ ಮಾಡಿಕೊಂಡು, ನಂತರ ತೀರಿಸುವುದು ಜನ ಸಾಮಾನ್ಯರಲ್ಲಿ ಕಾಮನ್, ಆದರೆ ...

Published On :
ಚಿತ್ರದುರ್ಗ: ತಮ್ಮ ವಯಕ್ತಿಕ ಆಸೆ, ಆಕಾಂಕ್ಷೆ ಈಡೇರಿಸುವಂತೆ ದೇವರಲ್ಲಿ ಹರಕೆ ಮಾಡಿಕೊಂಡು, ನಂತರ ತೀರಿಸುವುದು ಜನ ಸಾಮಾನ್ಯರಲ್ಲಿ ಕಾಮನ್, ಆದರೆ ಚಿತ್ರದುರ್ಗದ ಜನ ಪ್ರತಿನಿಧಿಗಳು ಸ್ವಲ್ಪ ಡಿಫರೆಂಟ್ ಆಗಿದ್ದಾರೆ, ಏಕೆಂದರೇ ಚಿತ್ರದುರ್ಗದ ಸುರಂಗಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಿರುಪತಿಯ ಬಾಲಾಜಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಭದ್ರಾ ಮೇಲ್ಡಂಡೆ ಯೋಜನೆಯ ಸುರಂಗ ಕಾಮಗಾರಿ ಸಂಪೂರ್ಣಗೊಂಡಿದ್ದು, ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭಾನುವಾರ ತಿರುಪತಿಯಲ್ಲಿ ತಿಮ್ಮಪ್ಪನಿಗದೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ಸಲ್ಲಿಸಿದ್ದಾರೆ.
ನಮ್ಮ ಕೋರಿಕೆ ಈಡೇರಿದ್ದಕ್ಕೆ ನಾವು ವಿಶೇಷ ಪೂಜೆ ಸಲ್ಲಿಸಿದ್ದೇವೆ, ಈ ಕಾಮಗಾರಿ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ ನಾವು ಅಂದುಗೊಂಡಿದ್ದಕ್ಕಿಂತ ಮೊದಲೇ ಮುಗಿದಿದೆ, ಈ ಯೋಜನೆಯಿಂದ ಚಿತ್ರದುರ್ಗ ಮತ್ತು ಇತರ ಮೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ, ಹೀಗಾಗಿ ಈ ಭಾಗದ ಜನರ ಕನಸು ಶೀಘ್ರವೇ ನೆರವೇರಲಿದೆ ನಮೆಗೆಲ್ಲಾ ತುಂಬಾ ಸಂತೋಶವಾಗಿದೆ ಎಂದು ಚಿತ್ರದುರ್ಗ ಸಂಸದ ಬಿ,.ಎನ್ ಚಂದ್ರಪ್ಪ ಹೇಳಿದ್ದಾರೆ.
ಸಂಸದ ಚಂದ್ರಪ್ಪ ಅವರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಡಿ. ಸುಧಾಕರ್, ಹಾಗೂ ಗೋವಿಂದಪ್ಪ ಸೇರಿದಂತೆ ಅವರೆ ಬೆಂಬಲಿಗರೆಲ್ಲಾ ಶನಿವಾರ ಚಿತ್ರದುರ್ಗದಿಂದ ಹೊರಟು ಭಾನುವಾರ ತಿರುಪತಿಯಲ್ಲಿ ಪೂಜೆ ಸಲ್ಲಿಸಿ ಸೋಮವಾರ ವಾಪಸಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ತಿರುಮಲTirumalachitradurgaಚಿತ್ರದುರ್ಗtunnelವಿಶೇಷ ಪೂಜೆSpecial pujaUpper Bhadra projectಭದ್ರಾ ಮೇಲ್ದಂಡೆ ಯೋಜನೆಸುರಂಗಮಾರ್ಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


