ರಾಜ್ಯ

ಕೋರ್ಟ್ ತೀರ್ಪಿಗೆ ಸ್ವಾಗತ, ಆದರೆ ಶಬರಿಮಲೆ ದೇವಾಲಯದ ಆಚರಣೆ ಗೌರವಿಸುತ್ತೇನೆ: ಕಾಂಗ್ರೆಸ್ ನಾಯಕಿ ಕವಿತಾ ಸನಿಲ್

ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ವೈಯಕ್ತಿಕವಾಗಿ ನಾನು ಶಬರಿಮಲೆ ದೇವಾಲಯದ ಪಾವಿತ್ರ್ಯತೆಗೆ ಗೌರವ ನೀಡುತ್ತೇನೆ.

ಕೋರ್ಟ್ ತೀರ್ಪಿಗೆ ಸ್ವಾಗತ, ಆದರೆ ಶಬರಿಮಲೆ ದೇವಾಲಯದ ಆಚರಣೆ ಗೌರವಿಸುತ್ತೇನೆ: ಕಾಂಗ್ರೆಸ್ ನಾಯಕಿ ಕವಿತಾ ಸನಿಲ್
ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ಶಬರಿಮಲೆ ದೇವಾಲಯದ ಆಚರಣೆ ಗೌರವಿಸುತ್ತೇನೆ: ಕಾಂಗ್ರೆಸ್ ನಾಯಕಿ ಕವಿತಾ ಸನಿಲ್
Published On :
ಮಂಗಳೂರು: ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ವೈಯಕ್ತಿಕವಾಗಿ ನಾನು ಶಬರಿಮಲೆ ದೇವಾಲಯದ ಪಾವಿತ್ರ್ಯತೆಗೆ ಗೌರವ ನೀಡುತ್ತೇನೆ. ದೇವಾಲಯದ ಆಚರಣೆಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ಮಂಗಳೂರಿನ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ ಹೇಳಿದ್ದಾರೆ. 
ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಸುಪ್ರೀಂ ಕೋರ್ಟ್ ತೀರ್ಪಿಗೆ ನಾನು ತಲೆ ಬಾಗುತ್ತೇನೆ, ಆದರೆ ಮಧ್ಯವಯಸ್ಸಿನ ಮಹಿಳೆಯರು ಮಾತ್ರ ಹೋಗಬಾರದು ಎಂಬ ಅಂಶವನ್ನು  ಹಿಂದೂ ಧರ್ಮದ ಓರ್ವ ಮಹಿಳೆಯಾಗಿ, ದೇವಾಲಯದ ಪಾವಿತ್ರ್ಯತೆಗೆ ಗೌರವ ನೀಡುತ್ತೇನೆ ಶಬರಿಮಲೆ ದೇವಾಲಯ ಬೇರೆ ದೇವಾಲಯಗಳಂತೆ ಅಲ್ಲ. ಅದಕ್ಕೆ ಅದರದ್ದೇ ಆದ ಗೌರವ ಪಾವಿತ್ರ್ಯತೆ ಸಂಪ್ರದಾಯಗಳಿವೆ, ವೈಯಕ್ತಿಕವಾಗಿ ನಾನು ಅವುಗಳನ್ನು ಪಾಲಿಸುತ್ತೇನೆ.  ನನಗೂ ಶಬರಿಮಲೆ ದೇವಾಲಯಕ್ಕೆ ಹೋಗಬೇಕೆಂಬ ಆಸೆ ಇದೆ. ಆದರೆ ಈಗ ಹೋಗುವುದಿಲ್ಲ ಹೋಗುವ ಅವಕಾಶ ಸ್ವಾಭಾವಿಕವಾಗಿ ಸಿಕ್ಕಿದಾಗ ಹೋಗುತ್ತೇನೆ" ಎಂದು ಹೇಳ್ದಿದಾರೆ.   
ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ಸುಪ್ರ‍ೀಂ ಕೋರ್ಟ್ ಆದೇಶ ದೊರಕಿಸಿಕೊಟ್ಟಿರಬಹುದು, ಆದರೆ ಆಚರಣೆ, ಪಾವಿತ್ರ್ಯತೆಗಳನ್ನು ಕಾಪಾಡುವುದರ ಬಗ್ಗೆ ಹಿಂದೂ ಧರ್ಮದ ಮಹಿಳೆಯರು ಯೋಚನೆ ಮಾಡಬೇಕಿದೆ ಎಂದು ಕವಿತಾ ಸನಿಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.