ರಾಜ್ಯ

ಏರೋ ಇಂಡಿಯಾ 2019 ಶೋ ಉಸ್ತುವಾರಿ ಹೆಚ್ ಎಎಲ್ ಹೆಗಲಿಗೆ: ವಾಯುಪಡೆ

ರಕ್ಷಣಾ ಪ್ರದರ್ಶನ ಸಂಘಟನೆಯ(ಡಿಇಒ) ಮರುರಚನೆಯಾಗಿರುವುದರಿಂದ ಭಾರತ ವೈಮಾನಿಕ ಪ್ರದರ್ಶನ 2019ರ ಪ್ರದರ್ಶನದ ಉಸ್ತುವಾರಿಯನ್ನು ಹಿಂದೂಸ್ತಾನ್ ...

ಏರೋ ಇಂಡಿಯಾ 2019 ಶೋ ಉಸ್ತುವಾರಿ ಹೆಚ್ ಎಎಲ್ ಹೆಗಲಿಗೆ: ವಾಯುಪಡೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಕ್ಷಣಾ ಪ್ರದರ್ಶನ ಸಂಘಟನೆಯ(ಡಿಇಒ) ಮರುರಚನೆಯಾಗಿರುವುದರಿಂದ ಭಾರತ ವೈಮಾನಿಕ ಪ್ರದರ್ಶನ 2019 ಪ್ರದರ್ಶನದ ಉಸ್ತುವಾರಿಯನ್ನು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್ಎಎಲ್) ವಹಿಸಿಕೊಳ್ಳಲಿದೆ ಎಂದು ಎಂದು ಏರ್ ಮಾರ್ಷಲ್ ಆರ್ ಕೆ ಸಿಂಗ್ ಬದೌರಿಯಾ ತಿಳಿಸಿದ್ದಾರೆ.

ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವರ್ಷ ಫೆಬ್ರವರಿ 20ರಿಂದ 24ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋದ ಉಸ್ತುವಾರಿಯನ್ನು ಹೆಚ್ಎಎಲ್ ನೋಡಿಕೊಳ್ಳಲಿದೆ. ಇಷ್ಟು ವರ್ಷ ಡಿಇಒ ಕಾರ್ಯಕ್ರಮವನ್ನು ಸಂಘಟಿಸುತ್ತಾ ಬಂದಿತ್ತು. ಆದರೆ ಇದೀಗ ಡಿಇಒವನ್ನು ಮರುರಚನೆ ಮಾಡಲಾಗಿರುವುದರಿಂದ ಈ ವರ್ಷದ ಉಸ್ತುವಾರಿ ಹೆಚ್ ಎಎಲ್ ನೋಡಿಕೊಳ್ಳಲಿದೆ. ಪ್ರಧಾನಿ ಮೋದಿಯವರು ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡುವಂತೆ ಅವರನ್ನು ಕೋರುತ್ತೇವೆ ಎಂದು ಹೇಳಿದರು.

ರಾಫೆಲ್ ಯುದ್ಧ ವಿಮಾನ ಮುಂದಿನ ಏರ್ ಶೋದಲ್ಲಿ ಭಾಗವಹಿಸಲಿದೆ. ಆದರೆ ಭಾರತೀಯ ವಾಯುಪಡೆಗೆ ಪೂರೈಸಲಿರುವ ರಾಫೆಲ್ ಯುದ್ಧ ವಿಮಾನ ಇನ್ನೂ ಸಿದ್ಧವಾಗದಿರುವುದರಿಂದ ಅದು ಭಾಗವಹಿಸಲು ಸಾಧ್ಯವಿಲ್ಲ. ಫ್ರಾನ್ಸ್ ನ ಡಸ್ಸೌಲ್ಟ್ ಸಂಸ್ಥೆ ಏರ್ ಶೋದಲ್ಲಿ ಬೇರೆ ರಾಫೆಲ್ ಯುದ್ಧ ವಿಮಾನವನ್ನು ಹಾರಿಸಬಹುದೆಂಬ ನಿರೀಕ್ಷೆಯಿದೆ ಎಂದು ಕೂಡ ಅವರು ಹೇಳಿದರು.

ಮುಂದಿನ ವರ್ಷ ಸೆಪ್ಟೆಂಬರ್ ನಂತರ ಡಸ್ಸೌಲ್ಟ್ ವಾಯುಯಾನ ಸಂಸ್ಥೆ 36 ರಾಫೆಲ್ ಬಹು ಕಾರ್ಯವಿಧಾನದ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಪೂರೈಸಲಿದೆ. ಅತ್ಯಾಧುನಿಕ ನಾಲ್ಕನೇ ತಲೆಮಾರಿನ ರಾಫೆಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ರಷ್ಯಾ ನಿರ್ಮಿತ ಹಳೆಯ ಮಿಗ್-21 ಯುದ್ಧ ವಿಮಾನದ ಬದಲಿಗೆ ಸೇರ್ಪಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.