ನಾಳೆ ಬೆಂಗಳೂರಿಗೆ ಪ್ರಣಬ್: ಜಾಫರ್ ಶರೀಫ್ ಮನೆಗೆ ಮಾಜಿ ರಾಷ್ಟ್ರಪತಿ ಭೇಟಿ
ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ನಿವಾಸಕ್ಕೆ ನಾಳೆ (ಬುಧವಾರ) ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಲಿದ್ದಾರೆ

Published On :
ಬೆಂಗಳುರು: ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ನಿವಾಸಕ್ಕೆ ನಾಳೆ (ಬುಧವಾರ) ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಲಿದ್ದಾರೆ. ಅಗಲಿದ ನಾಯಕನ ಕುಟುಂಬದವರಿಗೆ ಪ್ರಣಬ್ ಸಾಂತ್ವನ ಹೇಳಲಿದ್ದಾರೆ.
ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ "ಇಂಡಿಯಾ ವಿನ್ಸ್ ಫ್ರೀಡಮ್" ಆಂಗ್ಲ ಕೃತಿಯ ಉರ್ದು ಅನುವಾದ ಮಾಡಿದ್ದ ಜಾಫರ್ ಶರೀಫ್ ಅವರ ಪುಸ್ತಕ ಬಿಡುಗಡೆ ಸಮಾರಂಭ ನ. 28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಬೇಕಿದ್ದು ಇದಕ್ಕೆ ಪ್ರಣಬ್ ಅವರನ್ನು ಆಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮವು ಪೂರ್ವನಿಗದಿಯಂತೆ ಬುಧವಾರ ನಡೆಯಲಿದ್ದು ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಣಬ್ ಜಾಫರ್ ಶರೀಫ್ ಮನೆಗೆ ತೆರಳಿ ಅವರ ಕುಟುಂಬದವರಲ್ಲಿ ಸಾಂತ್ವನ ಹೇಳಲಿದ್ದಾರೆ.
ಮಾಜಿ ರಾಷ್ಟ್ರಪತಿ ಶರೀಫ್ ನಿವಾಸಕ್ಕೆ ಭೇಟಿ ನೀಡುವ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೇರಿ ಸರ್ಕಾರದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pranab Mukherjeeಪ್ರಣಬ್ ಮುಖರ್ಜಿಜಾಫರ್ ಶರೀಫ್Jaffar SharifFormer President\'s Bengaluru visitಮಾಜಿ ರಾಷ್ಟ್ರಪತಿ ಬೆಂಗಳೂರು ಭೇಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


