ಮಂಡ್ಯ: ಭೀಕರ ಬಸ್ ದುರಂತದಲ್ಲಿ ಬದುಕಿ ಬಂದ ಬಾಲಕ ಅಪಘಾತದ ಬಗ್ಗೆ ಹೇಳಿದ್ದು!
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ರಾಜಕುಮಾರ್ ಹೆಸರಿನ ಖಾಸಗಿ ಬಸ್ ನಾಲೆಗೆ ಉರುಳಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ...

Published On :
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ರಾಜಕುಮಾರ್ ಹೆಸರಿನ ಖಾಸಗಿ ಬಸ್ ನಾಲೆಗೆ ಉರುಳಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಬಸ್ ದುರಂತದಲ್ಲಿ ಒಬ್ಬ ಯುವಕ ಹಾಗೂ ಒಬ್ಬ ಬಾಲಕ ಅದೃಷ್ಟವಶಾತ್ ಬಚಾವ್ ಆಗಿ ಬಂದಿದ್ದಾರೆ. ಬದುಕಿ ಬಂದಿರುವ ಗಿರೀಶ್ ಎಂಬಾತ ಕಿಟಕಿ ಗಾಜು ಹೊಡೆದು ಹೊರಬಂದಿದ್ದಾರೆ. ನಂತರ ಆರನೇ ತರಗತಿ ವಿದ್ಯಾರ್ಥಿ 13 ವರ್ಷದ ರೋಹಿತ್ ಎಂಬಾತನ ಜೀವ ಉಳಿಸಿದ್ದಾರೆ.
ನಂತರ ಮಾತನಾಡಿದ ಗಿರೀಶ್ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿತು. ಈ ವೇಳೆ ಬಸ್ ಕಂಡೆಕ್ಟರ್ ಹಾಗೂ ಚಾಲಕ ಇಬ್ಬರು ಬಸ್ ನಿಂದ ಜಿಗಿದು ಪರಾರಿಯಾಗಿದ್ದಾರೆ ಎಂದು ಗಿರೀಶ್ ಹೇಳಿದ್ದಾರೆ.
ಬಸ್ ಅಪಘಾತ ಕುರಿತು ಮಾತನಾಡಿರುವ ವದೇಸಂದ್ರದ ಬಾಲಕ ರೋಹಿತ್, ಬಸ್ ನಾಲೆಗೆ ಬೀಳುವ ಮುನ್ನ ಯಾರೋ ಒಬ್ಬರು ಬಸ್ ನಿಂದ ಹೊರಕ್ಕೆ ಹಾರಿದ್ದನ್ನು ಕಂಡಿದ್ದೆ ಎಂದು ಬಾಲಕ ಸ್ಥಳೀಯರ ಹತ್ತಿರ ಹೇಳಿಕೊಂಡಿರುವುದಾಗಿ ಸ್ಥಳೀಯರೊಬ್ಬರು ವಿವರಿಸಿದ್ದಾರೆ.
ಇಂದು ಶನಿವಾರವಾಗಿದ್ದರಿಂದ ಶಾಲೆ ಮಧ್ಯಾಹ್ನವಿದ್ದಿದ್ದರಿಂದ ಹೆಚ್ಚಾಗಿ ಶಾಲೆ ಮಕ್ಕಳು ಸಹ ಬಸ್ ನಲ್ಲಿದ್ದರು. ಇನ್ನು ಬಸ್ ನ ಕಿಟಕಿ ಗಾಜುಗಳು ಎಲ್ಲಾ ಮುಚ್ಚಿದ್ದರಿಂದ ಯಾರು ಹೊರಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


