ದಶಕದ ಹಿಂದೆ ತೆಗೆದುಕೊಂಡ ಸಾಲ ಇನ್ನೂ ಹಿಂತಿರುಗಿಸದ ರೈತರು!
ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ...

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡುತ್ತಿದ್ದರೆ, ರೈತರು ದಶಕಗಳ ಹಿಂದೆ ತಾವು ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ತಮ್ಮ ಸಂಕಷ್ಟದ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೆಲವರು ದಶಕಗಳ ಹಿಂದೆಯೇ ಸಾಲ ತೆಗೆದುಕೊಂಡಿದ್ದರು. ಕೆಲವು ಸರ್ಕಾರಗಳು ರೈತರ ಸಾಲ ಮನ್ನಾ ಘೋಷಿಸಿದ್ದರೂ ಕೂಡ ಕೆಲವು ರೈತರಿಗೆ ಅದರ ಫಲ ಸಿಕ್ಕಿಲ್ಲ ಎಂಬುದು ಇಲ್ಲಿ ಮುಖ್ಯ ವಿಷಯ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ 8 ಎಕರೆಗೂ ಅಧಿಕ ಜಮೀನು ಹೊಂದಿರುವ ನಾಗಪ್ಪ ಮೆಡ್ಲೆರಿ 16 ವರ್ಷಗಳ ಹಿಂದೆ ಪಡೆದುಕೊಂಡ ಸಾಲವನ್ನು ಇನ್ನೂ ಹಿಂತಿರುಗಿಸಿಲ್ಲ. ಅವರು ಟ್ರಾಕ್ಟರ್ ಖರೀದಿಸಲೆಂದು 1.5 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. ಸಾಲಕ್ಕೆ ಬಡ್ಡಿ ಸೇರಿಸಿ 2.2 ಲಕ್ಷ ರೂಪಾಯಿಯನ್ನು ಇದುವರೆಗೆ ನೀಡಿದ್ದರೆ ಇನ್ನೂ 80 ಸಾವಿರ ರೂಪಾಯಿ ಸಾಲ ಉಳಿಸಿಕೊಂಡಿದ್ದಾರೆ. ಅದಲ್ಲದೆ ಮೂರು ವರ್ಷಗಳ ಹಿಂದೆ 2.10 ಲಕ್ಷ ರೂಪಾಯಿಗಳನ್ನು ಸಾಲ ಪಡೆದುಕೊಂಡಿದ್ದನ್ನು ಸಹ ಹಿಂತಿರುಗಿಸಿಲ್ಲ.
ಇಷ್ಟು ಸುದೀರ್ಘ ವರ್ಷದಿಂದ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗಲಿಲ್ಲವೇಕೆ ಎಂದು ಕೇಳಿದರೆ ಸಾಲಮನ್ನಾ ಘೋಷಣೆಯಾಗುವ ಮುನ್ನ ಕೂಡ ನಾನು ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಅದಕ್ಕೆ ಹೊರತುಪಡಿಸಿ ನೆರೆ, ಬರಗಾಲ, ಮಳೆಗಾಲದಲ್ಲಿ ಸಕಾಲಕ್ಕೆ ಮಳೆಯಾಗದೆ ಕೊರತೆಯಾಗಿದ್ದರಿಂದ ಬೆಳೆ ಬಾರದೆ ಹಣಕಾಸಿನ ಕೊರತೆ ಎದುರಿಸುತ್ತಿದ್ದೆ ಎಂದರು.
ಮತ್ತೊಬ್ಬ ರೈತ ಲಿಂಗಪ್ಪ ಅನವೇರಿ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮೂರು ಎಕರೆ ಜಮೀನನ್ನು ಹೊಂದಿದ್ದು, 2006ರಲ್ಲಿ ತೆಗೆದುಕೊಂಡ ಒಂದೂವರೆ ಲಕ್ಷ ಸಾಲವನ್ನು ಹಿಂತಿರುಗಿಸಲಿಲ್ಲ. 1998ರಲ್ಲಿ ಅಂದಿನ ಸರ್ಕಾರ ಸಾಲಮನ್ನಾ ಘೋಷಿಸಿದ್ದರೂ ಕೂಡ ಬ್ಯಾಂಕಿನ ಅಧಿಕಾರಿಗಳ ಒತ್ತಡದಿಂದಾಗಿ ಸಾಲ ಹಿಂತಿರುಗಿಸಬೇಕಾಗಿತ್ತು. 8 ದಿನಗಳ ನಂತರ ಸರ್ಕಾರ ಸಾಲಮನ್ನಾ ಘೋಷಿಸಿತ್ತು.
ಈ ಬಗ್ಗೆ ಬ್ಯಾಂಕಿನಲ್ಲಿ ಕೇಳಿದರೆ ಸರ್ಕಾರದಿಂದ ಸರಿಯಾಗಿ ಜಾರಿಯಾಗಬೇಕು, ನಂತರವಷ್ಟೇ ಬ್ಯಾಂಕು ಸಾಲ ಮನ್ನಾವಾಗಲು ಸಾಧ್ಯ ಎನ್ನುತ್ತಾರೆ. ಹಾವೇರಿ ತಾಲ್ಲೂಕಿನ ಮತ್ತೊಬ್ಬ ರೈತ ಎಂ ಎಂ ಪಾಟೀಲ್, ಅಧಿಕಾರದಲ್ಲಿದ್ದ ಎಲ್ಲಾ ಮೂರು ಪಕ್ಷಗಳು ತನ್ನ ಸಾಲಮನ್ನಾ ಭರವಸೆಯನ್ನು ಈಡೇರಿಸಿಲ್ಲ. 2009ರಲ್ಲಿ ತೆಗೆದುಕೊಂಡ 65 ಸಾವಿರ ರೂಪಾಯಿ ಸಾಲವನ್ನು ಮನ್ನಾ ಮಾಡಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


