ಶಿರಾಡಿ ಘಾಟ್ ನವೆಂಬರ್ 15ರಿಂದ ಭಾರೀ ವಾಹನ ಸಂಚಾರ ಪ್ರಾರಂಭ
ಬೆಂಗಳೂರು-ಮಂಗಳುರು ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ನಾಳೆ (ನವೆಂಬರ್ 15) ಯಿಂದ ಘನವಾಹನ ಸಂಚಾರ ಪ್ರಾರಂಭವಾಗಲಿದೆ.

Published On :
ಮಂಗಳುರು: ಬೆಂಗಳೂರು-ಮಂಗಳುರು ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ನಾಳೆ (ನವೆಂಬರ್ 15) ಯಿಂದ ಭಾರೀ ವಾಹನ ಸಂಚಾರ ಪ್ರಾರಂಭವಾಗಲಿದೆ.
ನಾಳೆಯಿಂದ ಎಲ್ಲಾ ಬಗೆಯ ಘನ ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ಮುಕ್ತವಾಗಲಿದೆ ಎಂದು ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಶಿರಾಡಿ ಘಾಟ್ ಮಾರ್ಗದಲ್ಲಿ ಭಾರೀ ವಾಹನ ಸಂಚಾರದ ಪರಿಣಾಮ ರಸ್ತೆ ಕ್ಷಮತೆ ಹಾಗೂಸುರಕ್ಷತೆ ಕುರಿತು ಇದಾಗಲೇ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳೊಡನೆ ಚರ್ಚೆ ನಡೆಸಲಾಗಿದೆ.ಎಲ್ಲಾ ಬಗೆಯ ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಸದೃಢವಾಗಿದೆ.. ಈ ಕಾರಣದಿಂದ ನಾಳೆ ಬೆಳಗಿನಿಂದಲೇ ಎಲ್ಲಾ ಬಗೆಯ ವಾಹನಗಳು ಸಂಚಾರ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಮುನ್ನ ಬವೆಂಬರ್.12ರಿಂದಲೇ ಎಲ್ಲಾ ಬಗೆಯ ಭಾರೀ ವಾಹನ ಸಂಚಾರಕ್ಕೆ ಶಿರಾಡಿ ಘಾತ್ ನಲ್ಲಿ ಅನುಮತಿ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಉಭಯ ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಬರದ ಕಾರಣ ವಾಹನ ಸಂಚಾರ ಪ್ರಾರಂಭವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Shiradi Ghatಶಿರಾಡಿ ಘಾಟ್Mangaluru-Bengaluru highwayheavy vehiclesಮಂಗಳೂರು-ಬೆಂಗಳೂರು ಹೆದ್ದಾರಿಭಾರೀ ವಾಹನಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


