ಸಿಎಂ ನಂತರ ಪರಮೇಶ್ವರ್ ಕೂಡ ಟಿಪ್ಪು ಜಯಂತಿಗೆ ಗೈರು: ಸಿಂಗಾಪುರಕ್ಕೆ ತೆರಳಿದ ಡಿಸಿಎಂ!
ಬಿಜೆಪಿಯ ವಿರೋಧದ ನಡುವೆಯೂ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಆದರೆ, ಆಡಳಿತ ಯಂತ್ರದ ಪ್ರಮುಖರೇ ಈ ಕಾರ್ಯಕ್ರಮದಿಂದ ...

Published On :
ಬೆಂಗಳೂರು: ಬಿಜೆಪಿಯ ವಿರೋಧದ ನಡುವೆಯೂ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಆದರೆ, ಆಡಳಿತ ಯಂತ್ರದ ಪ್ರಮುಖರೇ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ವಿಶ್ರಾಂತಿ ಪಡೆಯಲು ತೆರಳುತ್ತಿರುವುದಾಗಿ ಹೇಳಿ ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿಯಿಂದ ದೂರ ಉಳಿದಿರುವ ಬೆನ್ನಲ್ಲೇ ಡಿಸಿಎಂ ಪರಮೇಶ್ವರ್ ಕೂಡ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.
ಆದರೆ ಅಚ್ಚರಿಯ ಬೆಳವಣಿಗೆ ಎಂಬಂತೆ ಇಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಕೂಡ ಕಾರ್ಯಕ್ರಮದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಆಚರಣೆಗೆ ತಂದ ಈ ಕಾರ್ಯಕ್ರಮದಿಂದ ಪರಮೇಶ್ವರ್ ಅವರೇ ದೂರ ಉಳಿಯ ಕಾರಣ ಏನಿರಬಹುದು ಎಂಬುದು ಆಶ್ಚರ್ಯ ಮೂಡಿಸಿದೆ.
ಮಾಜಿ ಸಚಿವ ಚೆನ್ನಿಗಪ್ಪ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಅವರ ಆರೋಗ್ಯ ವಿಚಾರಿಸಲು ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


