ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ನಾಡೋಜ ಪ್ರಶಸ್ತಿ ಪ್ರಧಾನ
ಪ್ರತಿಭಾವಂತ ಸಂಗೀತಗಾರರನ್ನು ವಿಶ್ವ ವಿದ್ಯಾನಿಲಯಗಳು ಹುಟ್ಟು ಹಾಕುವಲ್ಲಿ ವಿಫಲವಾಗಿವೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ...

Published On :
ಮೈಸೂರು: ಪ್ರತಿಭಾವಂತ ಸಂಗೀತಗಾರರನ್ನು ವಿಶ್ವ ವಿದ್ಯಾನಿಲಯಗಳು ಹುಟ್ಟು ಹಾಕುವಲ್ಲಿ ವಿಫಲವಾಗಿವೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಡಾ.ಪಂಡಿತ್ ರಾಜೀವ್ ತಾರಾನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಸರಸ್ವತಿಪುರಂನ ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಅವರಿಂದ ನಾಡೋಜ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಹಂಪಿ ವಿಶ್ವವಿದ್ಯಾನಿಲಯದಿಂದ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ನಮ್ಮ ಊರಿನ ಮಂದಿ ಹಾರ ಹಾಕಿ, ವಿಗ್ರಹ ಕೊಟ್ಟು ಗೌರವಿಸಿರುವುದರಿಂದ ಹೆಚ್ಚು ಖುಷಿಯಾಗುತ್ತಿದೆ. ನಾನು ಇನ್ನೂ ಕೆಲವು ದಿನ ಬದುಕಿರುತ್ತೇನೆ. ಅಷ್ಟರ ಒಳಗೆ ಈ ಪ್ರಶಸ್ತಿಯಂತೆ ನಿಮ್ಮ ವಿವಿಯಿಂದ ನಾಡಿಗೆ ಒಬ್ಬ ಸಂಗೀತಗಾರರನ್ನು ಕೊಡಿ ಆಗ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯಗಳ ಸಂಗೀತ ವಿಭಾಗಗಳಿಂದ ಸಂಗೀತಗಾರರೆ ಬರುತ್ತಿಲ್ಲ. ವಿವಿಯಲ್ಲಿರುವ ಪ್ರಾಧ್ಯಾಪಕರು 2 ಲಕ್ಷ ವೇತನ ಪಡೆಯುತ್ತಿದ್ದಾರೆಯೇ ಹೊರತು ಪ್ರತಿಭಾವಂತರನ್ನು ಹುಟ್ಟುಹಾಕುತ್ತಿಲ್ಲ. ಸಂಗೀತಗಾರ ರವಿಶಂಕರ್, ಅಲಿ ಅಕ್ಬರ್ ಖಾನ್ ಸಾಹೇಬ್ ಸೇರಿದಂತೆ ಸಂಗೀತದ ದಿಗ್ಗಜರೆಲ್ಲರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಹೀಗಾಗಿ ಪ್ರತಿಭಾವಂತ ಸಂಗೀತಗಾರರನ್ನು ಹುಟ್ಟುಹಾಕುವ ಜವಾಬ್ದಾರಿ ಹೊಂದಿರುವ ವಿಶ್ವವಿದ್ಯಾನಿಲಯಗಳು ಈ ನಿಟ್ಟಿನಲ್ಲಿ ಬದ್ಧತೆ ತೋರಬೇಕಿದೆ,'' ಎಂದರು.
ನಾನು ಸಂಗೀತಗಾರ. ಸದಾ ನುಡಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ನಮ್ಮಲ್ಲಿ ಸಂಗೀತವನ್ನು ಗುರುಮುಖಿ ವಿಧಾನದಿಂದ ಕಲಿಸುತ್ತೇವೆ. ಆದರೆ, ಇದೀಗ ಆ ಶಿಕ್ಷಣ ಕ್ರಮಕ್ಕೆ ಮಾನ್ಯತೆಯೇ ಇಲ್ಲವಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HampiಹಂಪಿKannada UniversityPandit Rajeev TaranathNadoja Awardಪಂಡಿತ್ ರಾಜೀವ್ ನಾಥನಾಡೋಜ ಪ್ರಶಸ್ತಿಕನ್ನಡ ವಿವಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


