ಬೆಂಗಳೂರು: ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಅರ್ಜಿದಾರರಿಗೆ ರು.1 ಲಕ್ಷ ದಂಡ
ಬಿಜೆಪಿ ಶಾಸಕ ಪ್ರಭು ಚೌಹಾಣ್ ಜಾತಿ ಪ್ರಮಾಣಪತ್ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಹಿಂಪಡೆದ ಬೀರದ್ ನಿವಾಸಿಯೊಬ್ಬರಿಗೆ ನ್ಯಾಯಾಲಯದ ಸಮಯ ಹಾಳು ಮಾಡಿದ್ದ....

Published On :
ಬೆಂಗಳೂರು: ಬಿಜೆಪಿ ಶಾಸಕ ಪ್ರಭು ಚೌಹಾಣ್ ಜಾತಿ ಪ್ರಮಾಣಪತ್ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಹಿಂಪಡೆದ ಬೀರದ್ ನಿವಾಸಿಯೊಬ್ಬರಿಗೆ ನ್ಯಾಯಾಲಯದ ಸಮಯ ಹಾಳು ಮಾಡಿದ್ದ ಕಾರಣ ಒಂದು ಲಕ್ಷ ರೂ. ದಂಡ ವಿಧಿಸಿದ ಅಪರೂಪದ ಘಟನೆ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆ ಕಮಿಷನರ್ ವಿಕಾಶ್ ಕುಮಾರ್ ವಿಕಾಶ್ ದಂಡ ವಿಧಿಸಿದ್ದು ಬೀದರ್ ನ ಔರಾದ್ ಶಾಸಕ ಪ್ರಭು ಚೌಹಾಣ್ ಜಾತಿ ಪ್ರಮಾಣಪತ್ರ ಸಂಬಂಧ ಬೀದರ್ ನಿವಾಸಿಯೊಬ್ಬರು ದಾವೆ ಹೂಡಿ ಕಲಾಪದ ಸಮಯ ವ್ಯರ್ಥ ಮಾಡಿದ್ದಾರೆಂದು ಆರೋಪಿಸಲಾಗಿದೆ. "ವಿಶೇಷ ಕೌನ್ಸಿಲ್ ಗಮನಿಸುವಂತೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆ ಔರಾದ್ ನಿಂದ ಸ್ಪರ್ಧಿಸಿದ್ದ ಬಿಜೆಪೊಇ ಅಭ್ಯರ್ಥಿ ಪ್ರಭು ಅವರ ಜಾತಿಯ ಸಂಬಂಧ ಮನವಿ ಪತ್ರದಲ್ಲಿ ಗಂಭೀರ ವಿಚಾರಗಳಿದೆ.ಆದರೆ ಚುನಾವಣೆಗೆ ಮುನ್ನ ಅರ್ಜಿ ಸಲ್ಲಿಸಿದ್ದ ಬೀದರ್ ನಿವಾಸಿ ರಾವ್ ಇದೀಗ ಅರ್ಜಿ ಹಿಂಪಡೆಯಲು ಮುಂದಾಗಿದ್ದಾರೆ.
"ಈ ಮೂಲಕ ಅವರು ನ್ಯಾಯಾಲಯದ ಅಮೂಲ್ಯ ಸಮಯವನ್ನು ಮಾತ್ರವಲ್ಲ, ವಿಶೇಷ ಕೌನ್ಸಿಲ್, ಪ್ರಭು ಅವರ ಸಮಯವನ್ನೂ ವ್ಯರ್ಥಗೊಳಿಸಿದ್ದಾರೆ" ಮೇಲ್ಮನವಿ ಪ್ರಾಧಿಕಾರ ತನ್ನ ಆದೇಶದಲ್ಲಿ ತಿಳಿಸಿದೆ.ವಿಕಾಶ್ ಗಮನಿಸುವಂತೆ ಅರ್ಜಿದಾರ ರಾವ್ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಆದ ಕಾರಣ ನ್ಯಾಯಾಲಯದ ಸಮಯ ವ್ಯರ್ಥಗೊಳಿಸಿದ ಅರ್ಜಿದಾರರಿಗೆ ಒಂದು ಲಕ್ಷ ದಂಡ ವಿಧಿಸಲಾಗಿದೆ.
ಪ್ರಕರಣವೇನು?
ಪ್ರಭು ಚೌಹಾಣ್ ಸಲ್ಲಿಸಿದ ಎಸ್ಸಿ' ಜಾತಿ ಪ್ರಮಾಣಪತ್ರದ ನ್ಯಾಯಬದ್ಧತೆ ಮತ್ತು ಸಿಂಧುತ್ವವನ್ನು ಪ್ರಶ್ನಿಸಿ ಬೀದರ್ ನಿವಾಸಿ ಶಂಕರ್ ರಾವ್ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಬೀದರ್ ಉಪ ಕಮಿಷನರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಾದ ಆಲಿಸಿದ ಬಳಿಕ 2017 ರ ನವೆಂಬರ್ 20 ರಂದು ಆ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ರಾವ್ ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಕಾಯ್ದೆಯಡಿಯಲ್ಲಿ ಕಮ್ಮಿಷನರ್ ಗೆ ಮತ್ತೆ ಮನವಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೀದರ್Bidarಪ್ರಭು ಚೌಹಾಣ್Caste certificateಜಾತಿ ಪ್ರಮಾಣಪತ್ರPrabhu Chauhanwasting time of courtನ್ಯಾಯಾಲಯದ ಸಮಯ ವ್ಯರ್ಥ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


