ಮಾಜಿ ಸಿಎಂ ರಾಮಕೃಷ್ಣ ಹೆಗ್ಡೆ ಅವರನ್ನೇ ಸೋಲಿಸಿದ್ದ ಬ್ಯಾರೇಜ್ ಹೀರೋ ಸಿದ್ದು ನ್ಯಾಮಗೌಡ!
ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ಇಂದು ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ...

Published On :
ಬಾಗಲಕೋಟೆ: ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ಇಂದು ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ.
ಸಿದ್ದು ನ್ಯಾಮಗೌಡ ಅವರು ಬ್ಯಾರೇಜ್ ಹೀರೋ ಎಂದೇ ಖ್ಯಾತರಾಗಿದ್ದವರು. ಚಿಕ್ಕ ಪಡಸಲಗಿ ಗ್ರಾಮದ ಬಳಿ ಬ್ಯಾರೇಜ್ ನಿರ್ಮಾಣ ಮಾಡಿದ್ದರು. ರೈತರಿಂದ ರೈತರಿಗಾಗಿ ನಿರ್ಮಾಣ ಮಾಡಿರುವ ಈ ಬ್ಯಾರೇಜ್ ದೇಶದಲ್ಲಿಯೇ ಮೊದಲ ಬ್ಯಾರೇಜ್ ಎಂಬ ಹೆಗ್ಗಳಿಕೆ ಪಡೆದಿದೆ.
ಇಂತಹ ನ್ಯಾಮಗೌಡರ ರಾಜಕೀಯ ಹಾದಿ ನೋಡಿದಾಗ ಅಚ್ಚರಿಯ ಸಂಗತಿಯೊಂದು ತಿಳಿಯುತ್ತದೆ. 1991ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಡ್ಗೆ ಅವರನ್ನೇ ಸಿದ್ದು ನ್ಯಾಮಗೌಡ ಅವರು ಸೋಲಿಸಿದ್ದರು. ಇದು ಅವರ ರಾಜಕೀಯ ಜೀವನದಲ್ಲಿ ಮೈಲಿಗಲ್ಲು ಎಂದೇ ಹೇಳಬಹುದು.
ಕಳೆದ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುುಲ್ ಗಾಂಧಿ ಅವರನ್ನು ಕರೆಯಿಸಿ, ಚಿಕ್ಕ ಪಡಸಲಗಿ ಬ್ಯಾರೇಜ್ ಗೆ ಮರಳಿ ನೀಡು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ನದಿಯ ನೀರನ್ನು ಮತ್ತೆ ನದಿಗೆ ತುಂಬಿಸುವ ಯೋಜನೆ ಪ್ರಾರಂಭಿಸಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಮುಖ ಪಾತ್ರವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್road accidentರಸ್ತೆ ಅಪಘಾತಜಮಖಂಡಿRamakrishna HegdeJamkhandiSiddu Nyamagoudaಸಿದ್ದು ನ್ಯಾಮಗೌಡರಾಮಕೃಷ್ಣ ಹೆಗ್ಡೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


